Urdu   /   English   /   Nawayathi

12 ಕೋಟಿ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ. ಮುದ್ರಾ ಸಾಲ ಸೌಲಭ್ಯ ವಿತರಣೆ

share with us

ನವದೆಹಲಿ: 29 ಮೇ (ಫಿಕ್ರೋಖಬರ್ ಸುದ್ದಿ) ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳು 12 ಕೋಟಿ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ.ಗಳ ಮುದ್ರಾ ಸಾಲ ಸೌಲಭ್ಯಗಳನ್ನು ವಿತರಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅವರು, ಅಸಹಾಯಕರಿಗೆ ಸಾಲ ಸೌಲಭ್ಯಗಳನ್ನು ನೀಡುವ ಕೇಂದ್ರ ಸರ್ಕಾರ ಯೋಜನೆ ಅಡಿ ನೆರವು ನೀಡಲಾಗಿದೆ ಎಂದರು.  ಈವರೆಗೆ ಬ್ಯಾಂಕ್‍ಗಳು ಮತ್ತು ಆರ್ಥಿಕ ಸಂಸ್ಥೆಗಳ ಮೂಲಕ 12 ಕೋಟಿ ಅರ್ಹ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ.ಗಳನ್ನು ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿ ವಿತರಿಸಲಾಗಿದೆ ಎಂದು ಮೋದಿ ಹೇಳಿದರು.

12 ಕೋಟಿ ಫಲಾನುಭವಿಗಳಲ್ಲಿ ಶೇ.28ರಷ್ಟು ಅಥವಾ 3.25 ಕೋಟಿ ಮಂದಿ ಪ್ರಥಮ ಬಾರಿಗೆ ಉದ್ಯಮಿಗಳಾದವರು. ಈ ಯೋಜನೆ ಅಡಿ ಸಾಲ ಪಡೆದ ಶೇ.74 ಅಥವಾ 9 ಕೋಟಿ ಮಂದಿ ಮಹಿಳೆಯರು ಹಾಗೂ ಶೇ.55ರಷ್ಟು ಜನರು ಎಸ್‍ಸಿ/ಎಸ್‍ಟಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು.

2015ರ ಏಪ್ರಿಲ್ 8ರಂದು ಪ್ರಧಾನಮಂತ್ರಿ ಮುದ್ರಾ ಯೋಜನೆ ಜಾರಿಗೊಳಿಸಲಾಗಿದ್ದು, ಕಾರ್ಪೊರೇಟ್ ರಹಿತ, ಕೃಷಿ ರಹಿತ ಸಣ್ಣ/ಅತಿಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂ.ಗಳ ಸಾಲ ನೀಡುವ ಯೋಜನೆ ಇದಾಗಿದೆ. ನಿನ್ನೆ ಉಜ್ವಲಾ ಯೋಜನೆಯ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದ್ದರು. ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳ ಜೊತೆ ಇಂದು ಕೂಡ ಉಪಾಹಾರದೊಂದಿಗೆ ಸಂವಾದ ಮುಂದುವರಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا