Urdu   /   English   /   Nawayathi

ಕೋಳಿಗಳಲ್ಲಿ ನಿಫಾ ವೈರಸ್: ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿದೆ ನಕಲಿ ಸಂದೇಶ

share with us

ತಿರುವನಂತಪುರಂ: 29 ಮೇ (ಫಿಕ್ರೋಖಬರ್ ಸುದ್ದಿ) ನಿಫಾ ವೈರಸ್ ಬ್ರಾಯ್ಲರ್ ಕೋಳಿಗಳ ಮೂಲಕ ಹರಡುತ್ತಿದೆ ಎಂಬ ನಕಲಿ ಸಂದೇಶವೊಂದು ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿದೆ. ಕೋಯಿಕ್ಕೋಡ್ ಡಿಎಂಒ ಅವರ ನಕಲಿ ಮುದ್ರೆ ಬಳಸಿರುವ ಪತ್ರವೊಂದರಲ್ಲಿ ಬ್ರಾಯ್ಲರ್ ಕೋಳಿಗಳಿಂದ ನಿಫಾ ಹರಡುತ್ತಿದೆ ಎಂಬ ಸಂದೇಶ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಇದು ಕೇವಲ ವದಂತಿ ಎಂದು ಬಲ್ಲಮೂಲಗಳು ಹೇಳಿವೆ.

ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೇರಳ ಕೋಳಿ ಮಾರಟಗಾರರ ಒಕ್ಕೂಟ ಒತ್ತಾಯಿಸಿದೆ.

ಸಾಮಾಜಿಕ ತಾಣಗಳಲ್ಲಿ ತಪ್ಪು ಸಂದೇಶ ರವಾನಿಸುವ ಮೂಲಕ ಆರೋಗ್ಯ ವಲಯದ ಚಟುವಟಿಕೆಗಳಿಗೆ ಬಾಧಕವಾಗುತ್ತದೆ. ಇಂತಹ ನಕಲಿ ಸಂದೇಶಗಳನ್ನು ಯಾರೂ ಸಾಮಾಜಿಕ ತಾಣಗಳ ಮೂಲಕ ಹರಡಿಸಬಾರದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا