Urdu   /   English   /   Nawayathi

ಸಿಬಿಎಸ್‌ಇ ಫಲಿತಾಂಶ: ಮೊದಲ ಸ್ಥಾನ ಹಂಚಿಕೊಂಡ ನಾಲ್ವರು ಪ್ರತಿಭಾನ್ವಿತರು

share with us

ನವದೆಹಲಿ: 29 ಮೇ (ಫಿಕ್ರೋಖಬರ್ ಸುದ್ದಿ) ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಇ) ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. 500ಕ್ಕೆ 499 ಅಂಕ ಗಳಿಸಿರುವ ನಾಲ್ಕು ವಿದ್ಯಾರ್ಥಿಗಳು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಗುರುಗ್ರಾಮ್‌ನ ದೆಹಲಿ ಪಬ್ಲಿಕ್‌ ಶಾಲೆಯ ಪಾರ್ಕರ್‌ ಮಿತ್ತಲ್‌, ಬಿಜನೋರ್‌ನ ಆರ್‌ಪಿ ಪಬ್ಲಿಕ್‌ ಶಾಲೆಯ ರಿಮ್‌ಜಿಮ್‌ ಅಗರ್ವಾಲ್‌, ಉತ್ತರ ಪ್ರದೇಶದ ಶಮ್ಲಿಯಲ್ಲಿರುವ ಸ್ಕಾಟಿಸ್‌ ಇಂಟರ್‌ನ್ಯಾಷನಲ್‌ ಶಾಲೆಯ ನಂದಿನಿ ಗರ್ಗ್‌ ಹಾಗೂ ಕೊಚ್ಚಿಯ ಭವಾನಿ ವಿದ್ಯಾಲಯದ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಜಿ. ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ದೆಹಲಿ, ಹರಿಯಾಣ ಹಾಗೂ ಜಾರ್ಖಂಡ್‌ನಲ್ಲಿ 10ನೇ ತರಗತಿಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಈ ವರ್ಷದ ಪರೀಕ್ಷೆಗಳು ವಿವಾದಕ್ಕೆ ಕಾರಣವಾಗಿದ್ದವು. ಆದರೆ, ಮಾನವ ಸಂಪನ್ಮೂಲ ಸಚಿವಾಲಯವು ಮರು ಪರೀಕ್ಷೆ ನಡೆಸದೆ ಇರಲು ತೀರ್ಮಾನಿಸಿತ್ತು.

ತಿರುವನಂತಪುರಂ ಉತ್ತಮ ಸಾಧನೆ

ಒಟ್ಟು ಶೇ. 86.70 ವಿದ್ಯಾರ್ಥಿಗಳು ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಾದೇಶಿಕವಾರು ಫಲಿತಾಂಶದಲ್ಲಿ ತಿರುವನಂತಪುರಂ ಉತ್ತಮ ಸಾಧನೆ ತೋರಿದ್ದು, ಇಲ್ಲಿನ ಶೇ. 99.6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಚೆನ್ನೈ(97.37%) ಮತ್ತು ಅಜ್ಮೀರ್‌ (91.86) ಕ್ರಮವಾಗಿ 2, 3ನೇ ಸ್ಥಾನಗಳಲ್ಲಿವೆ.

ವಿದ್ಯಾರ್ಥಿನಿಯರದೆ ಮೇಲುಗೈ

ಹೆಣ್ಣು ಮಕ್ಕಳ ಉತ್ತೀರ್ಣ ಪ್ರಮಾಣ ಈ ವರ್ಷವೂ ಹೆಚ್ಚಾಗಿದೆ. ಪರೀಕ್ಷೆಗೆ ಹಾಜರಾದವರಲ್ಲಿ ಶೇ. 85.32 ಗಂಡು ಮಕ್ಕಳು ಪಾಸಾಗಿದ್ದರೆ, ಶೇ. 88.67 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

***

ಒಟ್ಟು ಪರೀಕ್ಷಾ ಕೇಂದ್ರಗಳು: 4460

ಒಟ್ಟು ಶಾಲೆಗಳು: 17567

ಪರೀಕ್ಷೆಗೆ ಹಾಜರಾದವರು: 1624682

ಪಾಸಾದವರು: 1408594

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا