Urdu   /   English   /   Nawayathi

ಒಮಾನ್‌ನಲ್ಲಿ ಇಬ್ಬರು ಭಾರತೀಯರ ಸಹಿತ 10 ಸಾವು

share with us

ಸಲಾಲಾ(ಒಮಾನ್‌): 27 ಮೇ (ಫಿಕ್ರೋಖಬರ್ ಸುದ್ದಿ) "ಮೆಕ್ನು' ಚಂಡ ಮಾರುತ ಶನಿವಾರ ಬೆಳಗ್ಗಿನ ಜಾವ ಅರಬಿ ದ್ವೀಪ ಕಲ್ಪಕ್ಕೆ ಅಪ್ಪಳಿಸಿದ್ದರಿಂದ ಒಮಾನ್‌ ಹಾಗೂ ಯೆಮೆನ್‌ನಲ್ಲಿ ಭಾರೀ ಮಳೆಯಾಗಿದೆ. ಚಂಡ ಮಾರುತದ ಆರ್ಭಟಕ್ಕೆ ಇಬ್ಬರು ಭಾರತೀಯರ ಸಹಿತ 10 ಮಂದಿ ಸಾವಿಗೀಡಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಐವರು ಯೆಮೆನಿಗಳು, ಮೂವರು ಒಮಾನಿಗಳು ಹಾಗೂ ಇಬ್ಬರು ಭಾರತೀಯರು ಸಾವಿಗೀಡಾಗಿದ್ದಾರೆ. ನಾಪತ್ತೆಯಾದವರಲ್ಲಿ ಯೆಮೆನಿಗಳು, ಭಾರತೀಯರು ಹಾಗೂ ಸುಡಾನಿಗಳು ಸೇರಿದ್ದಾರೆ ಎಂದು ರಾಯrರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಸಿಗೆ 170-180 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ ಚಂಡ ಮಾರುತದ ಹೊಡೆತಕ್ಕೆ ವಿದ್ಯುತ್‌ ಕಂಬಗಳು ಧರಾಶಾಯಿಯಾಗಿದ್ದು, ಒಮಾನ್‌ನ ಎರಡನೇ ಅತೀ ದೊಡ್ಡ ನಗರ ಸಲಾಲಾದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ವಿಮಾನ ನಿಲ್ದಾಣ, ಸಲಾಲಾ ಬಂದರನ್ನು ಮುಚ್ಚಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا