Urdu   /   English   /   Nawayathi

ಬಿಜೆಪಿ ಸಂಸದರೊಬ್ಬರ ತೋಟದ ಮನೆ ಸ್ಫೋಟಿಸಿದ ನಕ್ಸಲರು

share with us

ರಾಯ್‍ಪುರ್: 23 ಮೇ (ಫಿಕ್ರೋಖಬರ್ ಸುದ್ದಿ) ನಕ್ಸಲರ ಗುಂಪೊಂದು ಬಿಜೆಪಿ ಸಂಸದರೊಬ್ಬರ ತೋಟದ ಮನೆಯನ್ನು ಸ್ಪೋಟಿಸಿರುವ ಘಟನೆ ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ತಡರಾತ್ರಿ ನಡೆದಿದೆ. ಮುಖ್ಯಮಂತ್ರಿ ರಮಣ್ ಸಿಂಗ್ ಈ ಪ್ರದೇಶಕ್ಕೆ ಭೇಟಿ ನೀಡುವುದಕ್ಕೂ ಮುನ್ನವೆ ಈ ಕೃತ್ಯ ನಡೆದಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಕ್ಸಲರು ನಿನ್ನೆ ಮಧ್ಯರಾತ್ರಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮೂಲಕ ಕಂಕೇರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿಕ್ರಮ್ ಉಸೆಂಡಿ ಅವರ ಫಾರ್ಮ್‍ಹೌಸ್‍ನನ್ನು ಆಸ್ಫೋಟಿಸಿದರು. ಈ ದಾಳಿ ವೇಳೆ ತೋಟದ ಮನೆಯಲ್ಲಿ ಯಾರು ಇಲ್ಲದ ಕಾರಣ ಸಾವು-ನೋವು ಸಂಭವಿಸಲಿಲ್ಲ. ಸ್ಫೋಟದಿಂದ ಎರಡು ಕೊಠಡಿಗಳಿಗೆ ಹಾನಿಯಾಗಿದೆ.

ಈ ತೋಟದ ಮನೆ ಇರುವ ಗ್ರಾಮದಿಂದ ಕೇವಲ 15 ಕಿ.ಮೀ.ದೂರದಲ್ಲಿರುವ ಅಂತಗಢಗೆ ಇಂದು ಮುಖ್ಯಮಂತ್ರಿ ರಮಣ್ ಸಿಂಗ್ ವಿಕಾಸ್ ಯಾತ್ರೆ ಭೇಟಿ ಕಾರ್ಯಕ್ರಮಕ್ಕೂ ಮುನ್ನವೇ ಈ ಘಟನೆ ನಡೆದಿದೆ. ನಕ್ಸಲರ ಸ್ಫೋಟ ಕೃತ್ಯದ ನಂತರ ಈ ಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا