Urdu   /   English   /   Nawayathi

ಸಿಂಗಾರಗೊಂಡಿವೆ ಮತಗಟ್ಟೆಗಳು

share with us

ಮೂಡಬಿದಿರೆ: 12 ಮೇ (ಫಿಕ್ರೋಖಬರ್ ಸುದ್ದಿ) ರಾಜ್ಯ ಚುನಾವಣ ಆಯೋಗ ಈ ಬಾರಿ ಸಾಂಪ್ರದಾಯಿಕ ಮತಗಟ್ಟೆ ಹಾಗೂ ಪಿಂಕ್‌ ಮತಗಟ್ಟೆಗಳನ್ನು ಅನುಷ್ಠಾನಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 5 ಕಡೆ ಸಾಂಪ್ರದಾಯಿಕ ಶೈಲಿಯಲ್ಲಿ ಸಿಂಗಾರಗೊಂಡಿವೆ.

ತಾಳೆಗರಿ, ತೆಂಗಿನ ಗರಿ, ಸಾಂಪ್ರದಾಯಿಕ ಡೋಲು, ಕಳಸ, ವನಕೆ, ಕೆಂಪು, ಬಿಳಿ ವರ್ಣದ ಚಿತ್ತಾರಗಳು ಕಂಗೊಳಿಸುತ್ತಿವೆ. ಪ್ರವೇಶ ದ್ವಾರವನ್ನು ಹುಲ್ಲಿನ ಹೆಣಿಗೆಯೊಂದಿಗೆ ಸಿದ್ಧಪಡಿಸಲಾಗಿದೆ. ಅಕ್ಕಪಕ್ಕದಲ್ಲಿ ಸಾಂಪ್ರದಾಯಿಕ ಚಿತ್ರಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲ ಸಾಂಪ್ರದಾಯಿಕ ಮತಗಟ್ಟೆಗಳ ವಿನ್ಯಾಸ ರೂಪಿಸಿದವರು ಯಕ್ಷಗಾನ ಕಲಾವಿದರಾದ ಸುರತ್ಕಲ್‌ನ ಗಿರೀಶ್‌ ನಾವಡ ಅವರು.

ಪಿಂಕ್‌ ಮತಗಟ್ಟೆ
ಸ್ವಾಗತ ಗೋಪುರಗಳು ಗುಲಾಬಿ ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಗುಲಾಬಿ ಬಣ್ಣದ ಕಮಾನುಗಳನ್ನು ಅಳವಡಿಸಲಾಗಿದೆ. ಮತಗಟ್ಟೆಯ ಒಳಗೆ ಹಾಗೂ ಹೊರಗೆ ಗುಲಾಬಿ ಬಣ್ಣದ ಬಲುನುಗಳಿಂದ ಅಲಂಕರಿಸಲಾಗಿದೆ. ಮತಗಟ್ಟೆಯಲ್ಲಿರುವ ಎಲ್ಲ ಟೇಬಲ್‌, ಕುರ್ಚಿಗಳಿಗೆ ಗುಲಾಬಿ ಬಣ್ಣದ ಬಟ್ಟೆಗಳ ಹೊದಿಕೆ ಹಾಕಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಒಟ್ಟು 20 ಕಡೆ ಪಿಂಕ್‌ ಮತಗಟ್ಟೆ ಕೇಂದ್ರಗಳಿವೆ .

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا