Urdu   /   English   /   Nawayathi

ಸಲಿಂಗ ಕಾಮಕ್ಕೆ ಒಪ್ಪದ ಸ್ನೇಹಿತನ ಮೇಲೆ ಹಲ್ಲೆ, ಪೊಲೀಸರಿಗೆ ದೂರು

share with us

ನವದೆಹಲಿ: 10 ಮೇ (ಫಿಕ್ರೋಖಬರ್ ಸುದ್ದಿ) ಲೋಕೋಪಯೋಗಿ ಇಲಾಖೆಯಲ್ಲಿ(ಪಿಡಬ್ಲ್ಯೂಡಿ) ನಡೆದಿರುವ ಹಗರಣಕ್ಕೆ ಸಂಬಂಧಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಸಂಬಂಧಿಯನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ. ಕೇಜ್ರಿವಾಲ್ ಅವರ ಸೋದರ ಸಂಬಂಧಿ ಸುರೇಂದರ್ ಬನ್ಸಾಲ್ ಅವರ ಮಗ ವಿನಯ್‌ ಬನ್ಸಾಲ್‌ ಬಂಧಿತ ಆರೋಪಿ. ವಿಶೇಷ ಪೋಲಿಸ್‌ ಕಮಿಷನರ್‌ ಅರವಿಂದ್‌ ದೀಪ್‌ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

‘ತಮ್ಮ ತಂದೆಯ ಪಾಲುದಾರಿಕೆಯಲ್ಲಿ ಕಂಪೆನಿ ನಡೆಸಿಕೊಂಡಿರುವುದಾಗಿ ಹೇಳಿದ್ದ ಬನ್ಸಾಲ್‌, ನಿರ್ಮಾಣ ಕಾಮಗಾರಿಗೆ ಬಳಸುವ ಸಲಕರಣೆಗಳನ್ನು ಕೊಂಡುಕೊಳ್ಳುವ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿಸಿಕೊಳ್ಳಲು ನಕಲಿ ಬಿಲ್‌ಗಳನ್ನು ಸಲ್ಲಿಸಿದ್ದರು. ತನಿಖೆ ವೇಳೆ ಅಂತಹ ಯಾವುದೇ ಕಂಪೆನಿ ಇಲ್ಲದಿರುವುದು ಗೊತ್ತಾಗಿದ್ದು, ಬಿಲ್‌ಗಳೂ ನಕಲಿ ಎಂದು ತಿಳಿದು ಬಂದಿದೆ. ಇಂದು(ಗುರುವಾರ) ಆತನನ್ನು ಬಂಧಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ದೆಹಲಿಯ ಬಾಕೋಲಿ ಹಾಗೂ ಇಂದಿರಾ ನೆಹರು ಶಿಬಿರ ಪ್ರದೇಶಗಳಲ್ಲಿರುವ ಎರಡು ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ₹ 6 ಕೋಟಿ ಮೌಲ್ಯದ ನಕಲಿ ಬಿಲ್‌ಗಳನ್ನು ನೀಡಿದ್ದರು.

‘ಸುರೇಂದರ್ ಕುಮಾರ್‌ ಬನ್ಸಾಲ್‌ ಅವರು ಇಲಾಖೆಯಿಂದ ಹಣ ಪಡೆಯಲು ನಕಲಿ ಬಿಲ್‌ಗಳನ್ನು ಪಾವತಿಸಿದ್ದಾರೆ’ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಸಂಘಟನೆಯೊಂದರ ಸ್ಥಾಪಕ ರಾಹುಲ್‌ ಶರ್ಮಾ ಎನ್ನುವವರು ದೂರು ನೀಡಿದ್ದರು. ಅದರನ್ವಯ ಎಸಿಬಿ ಅಧಿಕಾರಿಗಳು 2017ರ ಮೇ ತಿಂಗಳಲ್ಲಿ ಎಫ್‌ಐಆರ್‌ದಾಖಲಿಸಿಕೊಂಡಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا