Urdu   /   English   /   Nawayathi

ಮೊಬೈಲ್‌ ಸಿಮ್‌ ಪಡೆಯಲು ಆಧಾರ್‌ ಕಡ್ಡಾಯವಲ್ಲ: ವರದಿ

share with us

ಹೊಸದಿಲ್ಲಿ: 02 ಮೇ (ಫಿಕ್ರೋಖಬರ್ ಸುದ್ದಿ) ಅನೇಕ ಸರಕಾರಿ ಸೇವೆಗಳನ್ನು ಪಡೆಯಲು ಅಧಿಕೃತ ಬಯೋಮೆಟ್ರಿಕ್‌ ಗುರುತು ಪತ್ರವಾಗಿರುವ ಆಧಾರ್‌ ಕಾರ್ಡ್‌ ಅತೀ ಮುಖ್ಯ ದಾಖಲೆಯಾದರೂ ಮೊಬೈಲ್‌ ಸಿಮ್‌ ಪಡೆಯುವುದಕ್ಕೆ ಅದು ಕಡ್ಡಾಯವಲ್ಲ ಎಂದು ವರದಿಗಳು ಹೇಳಿವೆ. ಮೊಬೈಲ್‌ ಸಿಮ್‌ ನೀಡುವುದಕ್ಕೆ ಆಧಾರ್‌ ಬದಲು ಇತರ ಗುರುತು ಪತ್ರ ದಾಖಲೆಗಳಾಗಿರುವ ಡ್ರೈವಿಂಗ್‌ ಲೈಸನ್ಸ್‌, ವೋಟರ್‌ ಐಡಿ ಕಾರ್ಡ್‌ ಇತ್ಯಾದಿಗಳನ್ನು  ಸ್ವೀಕರಿಸುವಂತೆ ಸರಕಾರ ಟೆಲಿಕಾಂ ನಿರ್ವಾಹಕರಿಗೆ ಸೂಚಿಸಿರುವುದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ತಿಳಿಸಿದೆ.

ಮೊಬೈಲ್‌ ಸಿಮ್‌ ನೀಡುವುದಕ್ಕೆ ಆಧಾರ್‌ ಹೊರತಾದ ಇತರ ಗುರುತು ದಾಖಲೆಗಳನ್ನು ತತ್‌ಕ್ಷಣದಿಂದಲೇ ಸ್ವೀಕರಿಸುವಂತೆ ಸರಕಾರ ಟೆಲಿಕಾಂ ಕಂಪೆನಿಗಳಿಗೆ ಸೂಚಿಸಿರುವುದಾಗಿ ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ತಿಳಿಸಿದ್ದಾರೆ.

ಸರಕಾರದ ವಿವಿಧ ಸೇವೆಗಳಿಗೆ ಆಧಾರ್‌ ಜೋಡಣೆಯನ್ನು ಕಡ್ಡಾಯ ಮಾಡುವ ಮಾಚ್‌ 31ರ ಗಡುವನ್ನು ಸುಪ್ರೀಂ ಕೋರ್ಟ್‌, ಈ ವಿಷಯದಲ್ಲಿ ತನ್ನ ಅಂತಿಮ ತೀರ್ಪು ಪ್ರಕಟವಾಗುವ ವರೆಗಿನ ಅನಿರ್ದಿಷ್ಟಾವಧಿಗೆ ಆಧಾರ್‌ ಜೋಡಣೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಹೇಳಿತು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا