Urdu   /   English   /   Nawayathi

ಕರ್ನಾಟಕದಲ್ಲಿ ಬಿಜೆಪಿ ಹವಾ ಇಲ್ಲ, ಬಿರುಗಾಳಿಯೇ ಎದ್ದಿದೆ: ಸಂತೇಮಾರನ ಹಳ್ಳಿಯಲ್ಲಿ ಪ್ರಧಾನಿ ಮೋದಿ

share with us

ಮೈಸೂರು: 01 ಮೇ (ಫಿಕ್ರೋಖಬರ್ ಸುದ್ದಿ) ಕರ್ನಾಟಕದಲ್ಲಿ ಬಿಜೆಪಿ ಹವಾ ಇಲ್ಲ, ಬಿರುಗಾಳಿಯೇ ಎದ್ದಿದೆ, ಬಿಸಿಲಲ್ಲಿ ನಿಂತು ಕಾಯುತ್ತಿರುವ ನಿಮ್ಮ ಶ್ರಮವನ್ನು ನಾವು ವ್ಯರ್ಥ ಮಾಡುವುದಿಲ್ಲ. ನಿಮ್ಮ ಕನಸು ಸಾಕಾರಗೊಳಿಸುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಅವರು ಇಂದು ಚಾಮರಾಜನಗರದ ಸಂತೇಮರನಹಳ್ಳಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದರು. ಎಲ್ಲೆಲ್ಲಿ ಕಾಂಗ್ರೆಸ್‌ ಇರುತ್ತದೊ ಅಲ್ಲೆಲ್ಲಾ ಅಪರಾಧ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತದೆ. ಸಾಮಾನ್ಯ ನಾಗರೀಕರ ಮಾತಿಗೆ ಬೆಲೆ ಇರುವುದಿಲ್ಲ, ಅಭಿವೃದ್ಧಿ ನಿಂತೇ ಹೋಗುತ್ತದೆ. ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಎರಡೂ ಕಡೆ ಚುನಾವಣೆಗೆ ನಿಂತಿದ್ದಾರೆ, ಕಳೆದ ಬಾರಿ ಗೆದ್ದ ಕ್ಷೇತ್ರದಿಂದ ಅವರ ಮಗನನ್ನು ಬಲಿ ಕೊಡಲು ನಿಂತಿದ್ದಾರೆ ಎಂದರು.

ಕರ್ನಾಟಕ ಚುನಾವಣೆ ಪ್ರಚಾರದ ವೇಳೆ 15 ನಿಮಿಷ ಸತತವಾಗಿ ಕರ್ನಾಟಕ ಕಾಂಗ್ರೆಸ್‌ನ ಸಾಧನೆಗಳ ಬಗ್ಗೆ ಮಾತನಾಡಿ ನೋಡೋಣ ಎಂದು ರಾಹುಲ್ ಗಾಂಧಿಗೆ ಸವಾಸೆದ ನರೇಂದ್ರ ಮೋದಿ, ರಾಹುಲ್ ಗಾಂಧಿಯವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಅವರಿಗೆ ವಂದೇ ಮಾತರಂ ಬಗ್ಗೆ ಗೌರವ ಇಲ್ಲ, ಅವರಿಗೆ ಅವರದ್ದೇ ಪಕ್ಷದ ನಾಯಕರ ಬಗ್ಗೆಯೂ ಗೊತ್ತಿಲ್ಲ ಎಂದವರು ವ್ಯಂಗ್ಯವಾಡಿದರು.

18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ನೀಡುವ ಮೂಲಕ ದೇಶವನ್ನು ಕತ್ತಲು ಮುಕ್ತ ದೇಶವನ್ನಾಗಿ ರೂಪಿಸಿದ್ದೇವೆ. ಮಣಿಪುರದ ಲೇಸಾಂಗ್ ಹಳ್ಳಿ ದೇಶದಲ್ಲಿ ವಿದ್ಯುತ್ ಪಡೆದ ಕಟ್ಟಕಡೆಯ ರಾಜ್ಯವಾಗಿದೆ. 

ಕರ್ನಾಟಕದಲ್ಲಿ 2014ರಲ್ಲಿ 39 ಹಳ್ಳಿಗಳಿಗೆ ವಿದ್ಯುತ್‌ ಇರಲಿಲ್ಲ. ನಮ್ಮ ಯೋಜನೆಯಿಂದ ಆ ಹಳ್ಳಿಗಳಿಗೆ ವಿದ್ಯುತ್‌ ತಲುಪಿತು. ಆದರೆ ಅಧಿಕಾರದಲ್ಲಿ ಇರುವ ನೀವು ಕಳೆದ 4 ವರ್ಷಗಳಲ್ಲಿ ನೀವು ಕೊಟ್ಟಿದ್ದು ಕೇವಲ 2 ಹಳ್ಳಿಗಳಿಗೆ ವಿದ್ಯುತ್ ಮಾತ್ರ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

10% ಕಮಿಷನ್‌ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಿದೆ. 12 ಮೇ ರಂದು ಕರ್ನಾಟಕದ ಭವಿಷ್ಯವನ್ನು ಆಯ್ಕೆ ಮಾಡಬೇಕಿದೆ. ಬಿಜೆಪಿಗೆ ಮತ ಹಾಕಿ ಕರ್ನಾಟಕದ ಭಾಗ್ಯವನ್ನು ಬದಲಾಯಿಸಿ ಎಂದು ಮನವಿ ಮಾಡಿಕೊಂಡ ಪ್ರಧಾನಿ ಮೋದಿ, ತಾನು ಗುಜರಾತ್‌ನಲ್ಲಿದ್ದಾಗ ಕರ್ನಾಟಕದ ಬಗ್ಗೆ ಕೇಳಿದಾಗ ಹೆಮ್ಮೆ ಆಗುತ್ತಿತ್ತು. 

ಆದರೆ ಕಳೆದ 5 ವರ್ಷ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದು ನೋಡಿದರೆ ಬೇಸರವಾಗುತ್ತದೆ, ಸಿಟ್ಟು ಬರುತ್ತದೆ. ಇಲ್ಲಿ ಮಹಿಳೆಯರು, ಮಕ್ಕಳು ಸುರಕ್ಷಿತರಲ್ಲ, ಇಲ್ಲಿ ಲೋಕಾಯುಕ್ತ ಕೂಡ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ ಎಂದವರು ಹೇಳಿದರು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا