Urdu   /   English   /   Nawayathi

ಪಿಯು ಫಸ್ಟ್‌ಕ್ಲಾಸ್ ಫಲಿತಾಂಶ : ದಕ್ಷಿಣ ಕನ್ನಡ ಪ್ರಥಮ, ಚಿಕ್ಕೋಡಿಗೆ ಕೊನೆ ಸ್ಥಾನ

share with us

ಬೆಂಗಳೂರು: 30 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಒಟ್ಟಾರೆ ಪ್ರಸಕ್ತ ವರ್ಷ ಶೇ. 59.56 ರಷ್ಟು ಫಲಿತಾಂಶ ಬಂದಿದೆ.

  • ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
  • ಒಟ್ಟಾರೆ ಈ ಸಾಲಿನಲ್ಲಿ 59.56 ರಷ್ಟು ಫಲಿತಾಂಶ
  • ನಾಳೆ ಎಲ್ಲ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟ
  • ಎಂದಿನಂತೆ ಬಾಲಕಿಯರೇ ಮೇಲುಗೈ
  • ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ
  • ಚಿಕ್ಕೋಡಿಗೆ ಕೊನೆಯ ಸ್ಥಾನ
  • ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 14 ಕಡೆಯ ದಿನ
  • ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ನಿಗದಿ
  • ಶುಲ್ಕ ತುಂಬಲು ಮೇ 15 ಕಡೆಯ ದಿನ
  • ಜೂನ್ 8 ರಿಂದ 20ರ ವರೆಗೆ ಪೂರಕ ಪರೀಕ್ಷೆ
  • ಮೇ ಅಂತ್ಯದೊಳಗೆ ಎಲ್ಲ ಕಾಲೇಜುಗಳಿಗೆ ಅಂಕಪಟ್ಟಿ ರವಾನೆ

ದಕ್ಷಿಣ ಕನ್ನಡ ಶೇ. 91.49 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಚಿಕ್ಕೋಡಿ ಶೇ. 52.20 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಡೆಯ ಸ್ಥಾನ ಪಡೆದಿದೆ.

ಪರೀಕ್ಷೆಗೆ ಹಾಜರಾದ 6,85,713 ವಿದ್ಯಾರ್ಥಿಗಳಲ್ಲಿ 4,08,421 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 7 ರಷ್ಟು ಫಲಿತಾಂಶ ಹೆಚ್ಚಾಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಪಿಯು ಫಲಿತಾಂಶ ಪ್ರಕಟವಾಗಲಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಫಲಿತಾಂಶ ಬಿಡುಗಡೆ ಮಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಪಿ. ಶಿಖಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 14 ಕೊನೆಯ ದಿನವಾಗಿದೆ. ಫಲಿತಾಂಶಕ್ಕೆ ಕಾಯದೆ ಮುಂದಿನ ಪರೀಕ್ಷೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಪರೀಕ್ಷೆಗೆ ಹಾಜರಾದ 3,49,592 ಬಾಲಕರ ಪೈಕಿ 1,82,852 ಮಂದಿ (ಶೇ. 52.30) ಹಾಗೂ ಬಾಲಕಿಯರಲ್ಲಿ ಪರೀಕ್ಷೆಗೆ ಹಾಜರಾಗಿದ್ದ 3,36,121 ಮಂದಿಯಲ್ಲಿ 2,25,569 ಮಂದಿ ಉತ್ತೀರ್ಣರಾಗಿದ್ದು, ಶೇ. 67.11 ರಷ್ಟು ತೇರ್ಗಡೆಯಾಗಿದ್ದಾರೆ ಎಂದು ಹೇಳಿದರು.

ಸರ್ಕಾರಿ ಕಾಲೇಜುಗಳಲ್ಲಿ ಶೇ. 61.39 ರಷ್ಟು ಅನುದಾನಿತ ಕಾಲೇಜುಗಳಲ್ಲಿ ಶೇ. 62,47 ರಷ್ಟು, ಅನುದಾನ ರಹಿತ ಕಾಲೇಜುಗಳಲ್ಲಿ ಶೇ. 72.84, ವಿಭಜಿತ ಕಾಲೇಜುಗಳಲ್ಲಿ ಶೇ. 73.70, ಕಾರ್ಪೋರೇಷನ್ ಕಾಲೇಜುಗಳಲ್ಲಿ ಶೇ. 57.17 ಸೇರಿದಂತೆ ಈ ಸಾಲಿನಲ್ಲಿ ಶೇ. 68.89 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಹೇಳಿದರು.

ಉನ್ನತ ಶ್ರೇಣಿಯಲ್ಲಿ 54,692 ವಿದ್ಯಾರ್ಥಿಗಳು ಶೇ. 85ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದು, ಶೇ. 85ಕ್ಕಿಂತ ಕಡಿಮೆ ಅಂಕ ಪಡೆದ 2,13,611 ಮಂದಿ, ಶೇ. 60ಕ್ಕಿಂತ ಕಡಿಮೆ ಅಂಕ ಪಡೆದ 82,532 ಹಾಗೂ ತೃತೀಯ ದರ್ಜೆಯಲ್ಲಿ 5,75,86 ಮಂದಿ ಸೇರಿದಂತೆ ಒಟ್ಟಾರೆ 4,08,421 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಿಂದ ಶೂನ್ಯ ಫಲಿತಾಂಶ ಪಡೆದಿರುವ 10 ಅನುದಾನಿತ ಕಾಲೇಜುಗಳ ಮಾನ್ಯತೆ ರದ್ಧತಿಗೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು ಪದವಿಪೂರ್ವ ಕಾಲೇಜುಗಳಲ್ಲಿ ಶೇ. ನೂರಕ್ಕೆ ನೂರರಷ್ಟು ಫಲಿತಾಂಶ ಕಾಲೇಜುಗಳ ಪೈಕಿ ಸರ್ಕಾರಿ ಕಾಲೇಜುಗಳು 25, ಅನುದಾನಿತ ಪಿಯು ಕಾಲೇಜುಗಳು 2, ಅನುದಾನರಹಿತ ಪಿಯು ಕಾಲೇಜುಗಳು 41 ಒಟ್ಟು 68 ಕಾಲೇಜುಗಳು ನೂರಕ್ಕೆ ನೂರು ಫಲಿತಾಂಶ ಪಡೆದಿವೆ ಎಂದು ಹೇಳಿದರು.

ತಲಾ ಮೂರು ಪದವಿಪೂರ್ವ ಕಾಲೇಜುಗಳು ಮತ್ತು ಅನುದಾನರಹಿತ ಕಾಲೇಜುಗಳು, 112 ಅನುದಾನರಹಿತ ಕಾಲೇಜುಗಳೂ ಸೇರಿದಂತೆ 118 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ಹೇಳಿದರು.

ಮೇ 14 ಕಡೆ ದಿನ

ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 14 ರಂದು ಕೊನೆಯ ದಿನವಾಗಿದ್ದು, ಪ್ರತಿ ವಿಷಯದ ಮರು ಮೌಲ್ಯಮಾಪನಕ್ಕೆ 1670 ರೂ. ಶುಲ್ಕ ಪಾವತಿಸಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯದೆ ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ ಅವರು, ಪೂರಕ ಪರೀಕ್ಷೆಗೆ ಪರೀಕ್ಷಾ ಶುಲ್ಕ ಪಾವತಿಸಲು ಮೇ 15 ಕಡೆ ದಿನವಾಗಿದೆ ಎಂದರು.

ಜೂನ್ 8 ರಿಂದ 20ರ ವರೆಗೆ ಪೂರಕ ಪರೀಕ್ಷೆಗಳನ್ನು ರಾಜ್ಯದೆಲೆಡೆ ನಡೆಸಲಾಗುವುದು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಭಾವಚಿತ್ರದಲ್ಲಿನ ನ್ಯೂನ್ಯತೆ ಸರಿಪಡಿಸಲು ಮೇ 2 ರಿಂದ 10ರ ವರೆಗೆ ಇಲಾಖೆಯ ಆನ್‌ಲೈನ್ ಪೋರ್ಟಲ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಪಾವತಿಸಬೇಕು ಎಂದರು.

ಕಳೆದ 3 ವರ್ಷಗಳಿಂದ ಶೂನ್ಯ ಫಲಿತಾಂಶ ಪಡೆದ 10 ಖಾಸಗಿ ಅನುದಾನ ಕಾಲೇಜುಗಳ ಮಾನ್ಯತೆ ರದ್ದು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.
– ಸಿ. ಶಿಖಾ, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ.

ಪೂರಕ ಪರೀಕ್ಷೆ
ಜೂ. 8 ರಿಂದ 20ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 14 ರಂದು ಕಡೆಯ ದಿನವಾಗಿದೆ. ಮೇ 15 ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ ನಿಗದಿ ಮಾಡಲಾಗಿದೆ.

ಮಾಧ್ಯಮವಾರು ಫಲಿತಾಂಶ
ಕನ್ನಡ-ಶೇ. 51.46
ಇಂಗ್ಲೀಷ್ -ಶೇ. 66.06

ನೂರಕ್ಕೆ ನೂರರಷ್ಟು ಅಂಕ
ಕನ್ನಡ- 115 ವಿದ್ಯಾರ್ಥಿಗಳು
ಸಂಸ್ಕೃತ -420
ಹಿಂದಿ – 45
ಐಚ್ಛಿತ – 1
ಇತಿಹಾಸ – 75
ಅರ್ಥಶಾಸ್ತ್ರ -85
ತರ್ಕ ಶಾಸ್ತ್ರ – 9
ಭೂಗೋಳ ಶಾಸ್ತ್ರ -521
ಲೆಕ್ಕಶಾಸ್ತ್ರ – 2917
ಸಂಖ್ಯಾ ಶಾಸ್ತ್ರ -943
ಮನಶಾಸ್ತ್ರ – 18
ಭೌತಶಾಸ್ತ್ರ – 772
ರಸಾಯನ ಶಾಸ್ತ್ರ – 1131
ಗಣಿತ ಶಾಸ್ತ್ರ – 3384
ಜೀವ ಶಾಸ್ತ್ರ – 208
ಎಲೆಕ್ಟ್ರಾನಿಕ್ಸ್ – 261
ಹಿಂದೂಸ್ತಾನಿ ಸಂಗೀತ – 3
ವ್ಯವಹಾರ ಅಧ್ಯಯನ – 1368
ಸಮಾಜ ಶಾಸ್ತ್ರ – 37
ರಾಜ್ಯ ಶಾಸ್ತ್ರ – 2
ಗಣಕ ವಿಜ್ಞಾನ – 1143
ಶಿಕ್ಷಣ – 217
ಮೂಲ ಗಣಿತ -314

ವಿಕಲ ಚೇತನ ವಿದ್ಯಾರ್ಥಿಗಳ ಫಲಿತಾಂಶ
ದೃಷ್ಟಿಮಾಂದ್ಯರು – ಶೇ. 60.73
ಶ್ರವಣ ಮತ್ತು ವಾಕ್ ದೋಷವುಳ್ಳವರು – 55.86
ಆರ್ಥೋ – 56.33
ಡಿಸ್‌ಲೆಕ್ಸಿಯ – 54.27

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಕಲಾವಿಭಾಗ – ಸ್ವಾತಿ ಕೊಟ್ಟೂರು -595
ರಮೇಶ್ – 593
ಗೊರವರ ಕಾವ್ಯಾಂಜಲಿ – 588
ಮೂರು ಮಂದಿ ಬಳ್ಳಾರಿಯ ಕೊಟ್ಟೂರಿನ ಹಿಂದೂ ಕಾಲೇಜಿನ ವಿದ್ಯಾರ್ಥಿಗಳು

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا