Urdu   /   English   /   Nawayathi

ಹುಡುಗಿಯ ಬಟ್ಟೆ ಹರಿದು ಎಳೆದಾಡಿದ ಎಂಟು ಯುವಕರು : ನೆರವಿಗೆ ಬಾರದ ಜನರು

share with us

ಜೆಹಾನಾಬಾದ್‌ (ಬಿಹಾರ): 30 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಹಾಡಹಗಲೇ ನಡುಬೀದಿಯಲ್ಲಿ ಎಂಟು ಯುವಕರು ಬಾಲಕಿಯೊಬ್ಬಳ ಬಟ್ಟೆಗಳನ್ನು ಹರಿದು, ಎಳೆದಾಡಿದ ಘಟನೆ ಬಿಹಾರದ ಜೆಹಾನಾಬಾದ್‌ನಲ್ಲಿ ನಡೆದಿದೆ. ದೌರ್ಜನ್ಯ ಎಸಗಿದ ಯುವಕರು ಅದರ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದರು. ಈ ಪೈಕಿ ಆರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕರ ಆಟಾಟೋಪಗಳಿಗೆ ನಲುಗಿದ ಬಾಲಕಿಯು, ತಪ್ಪಿಸಿಕೊಳ್ಳಲು ಹರಸಾಹಸಪಟ್ಟಿದ್ದಾಳೆ. ಆಕೆಯ ಕಿರುಚಾಟವೂ ವಿಡಿಯೊದಲ್ಲಿ ದಾಖಲಾಗಿದೆ. ಅವಳ ಬಟ್ಟೆಗಳನ್ನು ಹರಿಯುವ, ಕೈ–ಕಾಲುಗಳನ್ನು ಎಳೆದಾಡುವ ದೃಶ್ಯಗಳು ವಿಡಿಯೊದಲ್ಲಿವೆ. ಇಂತಹ ಕೃತ್ಯ ನಡೆಯುತ್ತಿರುವಾಗ ರಸ್ತೆಯ ಮೇಲೆ ಹಲವರು ತಮ್ಮಪಾಡಿಗೆ ತಾವು ನಡೆದು ಹೋಗುತ್ತಿದ್ದಾರೆ. ಆದರೆ ಯಾರೊಬ್ಬರೂ ಬಾಲಕಿಯ ಸಹಾಯಕ್ಕೆ ಬಂದಿಲ್ಲ. ಬದಲಿಗೆ ಅವರಲ್ಲಿಯೇ ಒಬ್ಬಾತ ಕೃತ್ಯದ ವಿಡಿಯೊ ಮಾಡಿದ್ದಾನೆ.

ಸಾವಿರಾರು ಜನರನ್ನು ತಲುಪಿರುವ ದೌರ್ಜನ್ಯದ ವಿಡಿಯೊ ಕುರಿತು ತನಿಖೆ ನಡೆಸಲು ಹಿರಿಯ ಐಪಿಎಸ್‌ ಅಧಿಕಾರಿ ನಯ್ಯರ್‌ ಹಸ್‌ನೈನ್‌ ಖಾನ್‌ ವಿಶೇಷ ತಂಡವೊಂದನ್ನು ರಚಿಸಿದ್ದರು. ಘಟನೆ ನಡೆದ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ ವಿಡಿಯೊ ಕ್ಲಿಪ್ಪಿಂಗ್‌ನಲ್ಲಿ ಸೆರೆಯಾಗಿದೆ. ಅದರ ನಂಬರ್‌ನ ಮೂಲಕ ಆರು ದುಷ್ಕರ್ಮಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ. ವಿಡಿಯೊ ಮಾಡಿದ ಮೊಬೈಲ್‌ ಅನ್ನು ಜಪ್ತಿ ಮಾಡಿದ್ದಾರೆ.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ಯಡಿ (ಪೋಸ್ಕೊ) ಆರೋಪಿಗಳ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರು, ಉಳಿದಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿ ಮತ್ತು ಅವಳ ಪೋಷಕರಿಗೆ ಆಪ್ತ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಈ ಘಟನೆ ಬೆಳಕಿಗೆ ಬಂದಿದೆ. 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಆದೇಶವನ್ನು ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ಇತ್ತೀಚೆಗೆ ಹೊರಡಿಸಿದೆ.

https://youtu.be/_jLgo47GmmY

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا