Urdu   /   English   /   Nawayathi

ಕಾರ್ಗೊ ಬಾಹ್ಯಾಕಾಶ ನೌಕೆ ಧರೆಯತ್ತ ಮರು ಪಯಾಣ

share with us

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕನ್ನು ಸರಬರಾಜು ಮಾಡಲು ಹೋಗಿದ್ದ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ತನ್ನ ಕಾರ್ಯ ಪೂರೈಸಿ ಧರೆಯತ್ತ ಮರಳಲು ಸಾಧ್ಯವಾಗಿದೆ. ಅಮೆರಿಕಾದ ಸ್ಪೇರ್ಸ್ ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ನಾಸಾದೊಂದಿಗಿನ ಒಪ್ಪಂದ ದಡಿಯಲ್ಲಿ ಅಮೆರಿಕಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 5800 ಪೌಂಡ್ ತೂಕದಷ್ಟು ವೈಜ್ಞಾನಿಕ ಉಪಕರಣಗಳು ಸೇರಿದಂತೆ ಅದರಲ್ಲಿಯ ಗಗನ ಯಾನಿಗಳಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಹೊತ್ತು ಏಪ್ರಿಲ್ 4 ರಂದು ಬಾಹ್ಯಾಕಾಶ ನಿಲ್ದಾಣವನ್ನು ತಲುಪಿತ್ತು.

ತಾನು ಹೊತ್ತುಕೊಂಡು ಹೋಗಿದ್ದ ಸರಕನ್ನು ಅಲ್ಲಿ ಇ–ಸಿದ್ದ ನೌಕೆ ಮೇ 2 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳುತ್ತಿದೆ.

ಅಮೆರಿಕಾದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಪೆರ್ಸ್ ಎಕ್ಸ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಾನು ಸರಂಜಾಮು ಮಾಡುವ ಗುತ್ತಿಗೆಯನ್ನು ಪಡೆದಿದೆ.

ಅದರಂತೆ ಈಗಾಗಲೇ ಹಲವು ಬಾರಿ, ಅಂತರರಾಷ್ಟ್ರೀಯ ನಿಲ್ದಾಣದಲ್ಲಿಯ ವೈಜ್ಞಾನಿಕ ಪ್ರಯೋಗಗಳಿಗೆ ಅಗತ್ಯವಿರುವ ಉಪಕರಣಗಳು ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳಿಗೆ ಆಹಾರ ಸೇರಿದಂತೆ ಇತರ ವಸ್ತುಗಳನ್ನು ಬಾಹ್ಯಾಕಾಶ ನೌಕೆಯ ಮೂಲಕ ಸರಬರಾಜು ಮಾಡಿದೆ.

ಸಾಮಾನು ಹೊತ್ತು ಬರುತ್ತದೆ

ಭೂಮಿಯಿಂದ ಸಾಮಾನು ಸರಂಜಾಮು ಹೊತ್ತು ಹೋಗುವ ಈ ಬಾಹ್ಯಾಕಾಶ ನೌಕೆ ಅಲ್ಲಿಂದ ವಾಪಸ್ಸು ಬರುವಾಗ ಖಾಲಿ ಬರುವುದಿಲ್ಲ, ಬದಲಿಗೆ ಅಲ್ಲಿ ನಿರುಪಯುಕ್ತವಾಗಿರುವ ಹಾಗೂ ವೈಜ್ಞಾನಿಕ ಸಂಶೋಧನಾ ಸಾಧನಗಳು, ದತ್ತಾಂಶಗಳನ್ನು ಹೊತ್ತು ತರುತ್ತದೆ. ಮೇ 2 ರಂದು ಭೂಮಿಗೆ ಮರಳುತ್ತಿರುವ ನೌಕೆ, 4000 ಪೌಂಡ್ ತೂಕದಷ್ಟು ಸಾಮಾನನ್ನು ಅಲ್ಲಿಂದ ಹೊತ್ತು ತರುತ್ತಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಳಚಿಕೊಳ್ಳುವ ಈ ಬಾಹ್ಯಾಕಾಶ ನೌಕೆ ಡ್ರ್ಯಾಗನ್ ಭೂಮಿಯತ್ತ ಮರಳುತ್ತದೆ. ಈಗಿನ ಅಂದಾಜಿನಂತೆ ಅದು ಅಂದು ಸಂಜೆ 4.02ರ ಸುಮಾರಿಗೆ ಕ್ಯಾಲಿಪೊರ್ನಿಯಾ ಕರಾವಳಿ ಭಾಗದ ಫೆಸಿಫಿಕ್ ಸಾಗರದಲ್ಲಿ ಇಳಿಯುತ್ತಿವೆ. ಇಳಿಯುತ್ತಿದ್ದಂತೆ ನೌಕೆಯನ್ನು ಮತ್ತು ಅದರಲ್ಲಿಯ ಸಾಮಾನನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗುತ್ತಿದೆ.

ನೌಕೆ ಫೆಸಿಫಿಕ್ ಸಾಗರದಲ್ಲಿ ಮೇ 2 ರಂದೇ ಇಳಿಯಲಿದೆ. ಆದರೆ ಅಂದಿನ ಹವಾಮಾನ ಅನುಸರಿಸಿ ಈ ಇಳಿಯುವ ಕಾರ್ಯ ನಿರ್ಧಾರವಾಗುತ್ತದೆ.
ಒಂದು ವೇಳೆ ನೌಕೆ ಇಳಿಯಲು ಪ್ರತೀಕೂಲ ಹವಾಮಾನ ಎದುರಾದರೆ, ನೌಕೆ ಮೇ 5 ರಂದು ಇಳಿಯಲಿದೆ ಎಂದೂ ನಾಸಾ ಮೂಲಗಳು ಹೇಳಿವೆ.

ಸ್ಪೇರ್ಸ್ ಎಕ್ಸ್

ಅಮೆರಿಕಾದ ಕ್ಯಾಲಿಪೋರ್ನಿಯಾದಲ್ಲಿರುವ ಖಾಸಗಿ ಬಾಹ್ಯಾಕಾಶ ಸಂಸ್ಥೆ ಇವರ ಕಾರ್ಯ ಬಾಹ್ಯಾಕಾಶ ಸಾಗಾಣಿಕೆ.

ಅಮೆರಿಕಾದ ಬಾಹ್ಯಾಕಾಶ ಸಂಶೋಧಾ ಸಂಸ್ಥೆ ನಾಸಾದೊಂದಿಗೆ ಬಾಹ್ಯಾಕಾಶ ಸರಕು ಸಾಗಾಣಿಕೆ ಒಪ್ಪಂದ ಮಾಡಿಕೊಂಡಿದೆ. ನಾಸಾದ ವಾಣಿಜ್ಯ ಸಾಗಾಣಿಕೆ ಅಡಿಯಲ್ಲಿ ಈ ಒಪ್ಪಂದ ಏರ್ಪಟ್ಟಿದೆ. ಇದರಂತೆ ಅಮೆರಿಕಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದು ಸಾಮಾನು ಸಲಕರಣೆ ಸರಬರಾಜು ಮೂಡುತ್ತಾ ಬಂದಿದೆ.

ಸಾಮಾನು ತುಂಬಿರುವ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಸ್ಪೇರ್ಸ್ ಎಕ್ಸ್ ಸಂಸ್ಥೆ ತನ್ನ ಫಾಲ್ಕನ್-9 ರಾಕೆಟ್ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡುತ್ತದೆ.

ಇದು ಮೂಲತಃ ಮಾನವರನ್ನು ಬಾಹ್ಯಾಕಾಶಕ್ಕೆ ಸಾಗಿಸಲು ವಿನ್ಯಾಸ ಮತ್ತು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಸಾಮಾನು ಸಲಕರಣೆಗಳನ್ನು ಸಾಗಿಸಲು ಅವಕಾಶವಿದೆ.

ಇದರ ಮೊಟ್ಟಮೊದಲ ಬಾಹ್ಯಾಕಾಶ ಸಾಗಾಣಿಕೆ ಯಾನ ಡಿಸೆಂಬರ್ 2010ರಲ್ಲಿ ಉಡಾವಣೆಕೊಂಡಿತ್ತು. ಇತ್ತೀಚಿನ ಇದರ ಯಾನ 14ನೇ ಬಾರಿಯದಾಗಿದೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا