Urdu   /   English   /   Nawayathi

ಪೋಲೀಸರ ಮೇಲೆ ಹಲ್ಲೆ ನಡೆಸಿದ ಯುವಕನ ಬಂಧನ

share with us

ಕಾಸರ್‍ಗೋಡ್: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕಾರ್ಯನಿರತ ಪೋಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ವಿದ್ಯಾನಗರ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದಲ್ಲಿರುವವನು ವಿದ್ಯಾನಗರದ ಪಾಣಳಮ್ ನಿವಾಸಿ ರಮೀಸ್ ಅಲಿಯಾಸ್ ಮುಹಮ್ಮದ್ ರಮೀಸ್(24) ಎಂದು ಹೇಳಲಾಗಿದೆ. ಫೆಬ್ರುವರಿ ತಿಂಗಳಿನಲ್ಲಿ ವಿದ್ಯಾನಗರದ ಪೋಲೀಸ್ ಠಾಣೆಯ ಹೆಚ್ಚುವರಿ ಎಸ್ ಐ ರಘುತ್ತಮನ್ ಅವರು ತಮ್ಮ ವಾಹನದಲ್ಲಿ ಗಸ್ತಿನ ವೇಳೆ ಪಾಣಳಮ್ ಕಡಲಿಗೆ ತಲುಪಿ ಅಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟವನ್ನು ಕಂಡು ಅವರನ್ನು ಹಿಡಿಯಲು ಯತ್ನಿಸಿದರು. ಅದೇ ವೇಳೆ ಅಕ್ರಮ ಸಾಗಾಟಕ್ಕೆ ಬೆಂಗಾವಲಾಗಿದ್ದ ಮುಹಮ್ಮದ್ ರಮೀಸನನ್ನು ಬಂಧಿಸಲು ಯತ್ನಿಸಿದಾಗ ರಮೀಸ್ ವಾಹನದ ಪೋಲೀಸ್ ಚಾಲಕನ ಮೇಲೆ ಹಲ್ಲೆ ಮಾಡಿ ಆತನಿಗೆ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆತನನ್ನು ಪೋಲೀಸರು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا