Urdu   /   English   /   Nawayathi

ಅಪ್ರಾಪ್ತ ವಯಸ್ಕರು ವಾಹನ ಓಡಿಸಿದ್ದಕ್ಕೆ ಪೋಷಕರು ಜೈಲಿಗೆ!

share with us

ಹೈದರಾಬಾದ್‌: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಅಪ್ರಾಪ್ತ ವಯಸ್ಕರು ರಸ್ತೆಯಲ್ಲಿ ವಾಹನ ಓಡಿಸಿದರೆ ಅವರ ಪೋಷಕರನ್ನು ಬಂಧಿಸುವ ಕಾರ್ಯಕ್ಕೆ ಪೊಲೀಸರು ಚಾಲನೆ ನೀಡಿದ್ದಾರೆ. ಕಳೆದೆರಡು ತಿಂಗಳಿನಲ್ಲಿ 26 ಪೋಷಕರ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ಕೋರ್ಟ್‌ ಜೈಲಿಗೆ ಕಳುಹಿಸಿದೆ. ‘ಮಕ್ಕಳು ವಾಹನ ಓಡಿಸುತ್ತಿರುವುದರಿಂದ ಇತ್ತೀಚೆಗೆ ಅಪಘಾತಗಳು ಹೆಚ್ಚಾಗಿರುವ ಬಗ್ಗೆ ತಿಳಿದು ಬಂದ ಕಾರಣ, ಇಂಥದ್ದೊಂದು ಕ್ರಮ ತೆಗೆದುಕೊಳ್ಳಲಾಗಿದೆ. ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ ಆಗಬಹುದಾದ ಅನಾಹುತಗಳ ಬಗ್ಗೆ ಮಕ್ಕಳು ಹಾಗೂ ಅವರ ಪೋಷಕರಿಗೆ ತಿಳಿಹೇಳುವ ಕೆಲಸವೂ ಸಾಗಿದೆ’ ಎಂದು ಜಂಟಿ ಪೊಲೀಸ್‌ ಕಮಿಷನರ್‌ (ಸಂಚಾರ) ಅನಿಲ್‌ ಕುಮಾರ್‌ ಹೇಳಿದ್ದಾರೆ.

‘ಬಾಲಕನೊಬ್ಬನನ್ನು ಈಗಾಗಲೇ ಒಂದು ತಿಂಗಳ ಮಟ್ಟಿಗೆ ಜೈಲಿಗೆ ಕೂಡ ಕಳುಹಿಸಲಾಗಿದೆ. ಮಕ್ಕಳ ವಾಹನ ಚಾಲನೆ ನಿಲ್ಲುವವರೆಗೆ ಇಂಥದ್ದೊಂದು ಕ್ರಮ ಮುಂದುವರಿಸಲಾಗುತ್ತದೆ’ ಎಂದು ಅನಿಲ್‌ಕುಮಾರ್‌ ಹೇಳಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا