Urdu   /   English   /   Nawayathi

ಉತ್ತರಪ್ರದೇಶ: ವ್ಯಾನ್ –ಟ್ರಕ್‌ ಡಿಕ್ಕಿ– 9 ಮಂದಿ ಸಾವು

share with us

ಉತ್ತರಪ್ರದೇಶ: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಲಕ್ಕಿಮ್‌ಪುರ ಖೇರಿ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ವ್ಯಾನ್ – ಟ್ರಕ್‌ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಕೆಲಸ ನಿಮಿತ್ತ 17 ಮಂದಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಬೆಳಿಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ಮ್ಯಾಜಿಕ್‌ ವ್ಯಾನ್‌ ಚಾಲಕ ಅನೂಪ್‌ ಅವಸ್ಥಿ (25), ಕ್ಲಿನರ್‌ ಕೀಶನ್‌ (23) ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಗೆ ವೇಗದ ಚಾಲನೆಯೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

View image on Twitter

ANI UP@ANINewsUP

Uttar Pradesh: 9 dead after a vehicle carrying 17 people rammed into a parked truck in Lakhimpur Kheri.

8:22 AM - Apr 28, 2018

 ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا