Urdu   /   English   /   Nawayathi

ಗಾಯಕಿ ಮೀಷಾಗೆ 100 ಕೋಟಿ ಮಾನಹಾನಿ ನೊಟೀಸ್‌ ನೀಡಿದ ಅಲಿ ಝಫ‌ರ್‌

share with us

ಹೊಸದಿಲ್ಲಿ: 25 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ತನ್ನ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿರುವ ಕಾರಣಕ್ಕೆ  ಪ್ರಖ್ಯಾತ ಪಾಕ್‌ ಗಾಯಕಿ ಮೀಷಾ ಶಫಿ ಅವರಿಗೆ  ಪಾಕ್‌ ಗಾಯಕ, ನಟ ಅಲಿ ಝಫ‌ರ್‌ ನೂರು ಕೋಟಿ ರೂ.ಗಳ ಮಾನಹಾನಿ ನೊಟೀಸ್‌ ಜಾರಿ ಮಾಡಿರುವುದಾಗಿ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ತನ್ನ ವಿರುದ್ಧದ ಎಲ್ಲ  ಆರೋಪಗಳನ್ನು ಅಲಿ ಝಫ‌ರ್‌ ಸಂಪೂರ್ಣ ಸುಳ್ಳೆಂದು ಹೇಳಿದ್ದಾರೆ. ಅಲಿ ಝಫ‌ರ್‌ ಅವರು 2010ರಲ್ಲಿ ತೇರೇ ಬಿನ್‌ ಲಾಡೆನ್‌ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದವರಾಗಿದ್ದಾರೆ. 

ಮೀಷಾ ಶಫೀ ಅವರು ತಾನು ಮಾಡಿರುವ ಸುಳ್ಳು ಆರೋಪಗಳಿಗಾಗಿ ಕ್ಷಮೆ ಯಾಚಿಸಬೇಕು ಎಂದು ಕೂಡ ಅಲಿ ಝಫ‌ರ್‌ ಆಗ್ರಹಿಸಿದ್ದಾರೆ. 

ಇದಕ್ಕೆ ಉತ್ತರವೆಂಬಂತೆ ಮೀಷ ಅವರು ಟ್ವಿಟರ್‌ನಲ್ಲಿ ತಾನು ಗೊತ್ತುಪಡಿಸಿಕೊಂಡಿರುವ ವಕೀಲರ ಮಾಹಿತಿ ನೀಡಿದ್ದು ತನ್ನ ವಿಷಯದಲ್ಲಿನ ಯಾವುದೇ ತಾಜಾ ಮಾಹಿತಿಳಿಗೆ ಮಾಧ್ಯಮದವರು ಅವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا