Urdu   /   English   /   Nawayathi

ಕುವೈಟ್ ಕ್ಷಮೆ ಕೋರಿದ ಫಿಲಿಫ್ಫೀನ್ಸ್: ಬಡವನ ಸಿಟ್ಟು ದವಡೆಗೆ ಕೇಡಂತೆ?

share with us

ಮನಿಲಾ: 25 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) 'ಬಡವನ ಸಿಟ್ಟು ದವಡೆಗೆ ಕೇಡು' ಎಂಬ ಮಾತನ್ನು ನೀವು ಕೇಳಿರಬಹುದು. ಕುವೈಟ್ ದೇಶದಲ್ಲಿ ಮಾಲಕರಿಂದ ದೌರ್ಜನ್ಯಕ್ಕೊಳಗಾದ ಫಿಲಿಫ್ಫೀನ್ಸ್ ನಾಗರಿಕರನ್ನು ರಕ್ಷಿಸಿದ ರಾಯಭಾರ ಕಚೇರಿಯ ಕ್ರಮಕ್ಕಾಗಿ ಇದೀಗ ಫಿಲಿಫ್ಫೀನ್ಸ್ ಕ್ಷಮೆ ಯಾಚಿಸಿದೆ. ಮನೆಗೆಲಸದ ಕಾರ್ಮಿಕರನ್ನು ಅವರು ಕೆಲಸ ಮಾಡುವ ಮನೆಮಾಲಕರಿಂದ ರಕ್ಷಿಸಿದ ಫಿಲಿಫ್ಫೀನ್ಸ್ ರಾಯಬಾರ ಕಚೇರಿಯ ಕ್ರಮವು ತನ್ನ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಕುವೈಟ್ ಆಡಳಿತ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ ಕ್ಷಮೆ ಕೋರಿದೆ.

ಹಾಗೆ ನೋಡಿದರೆ ಇದು ಫಿಲಿಪ್ಪೀನ್ಸ್ ಕುವೈಟ್ ವಿರುದ್ಧ ಸಿಟ್ಟಿನಿಂದ ಕೈಗೊಂಡ ಕ್ರಮವಾಗಿರಲಿಲ್ಲ. ಕುವೈಟ್‌ನಲ್ಲಿದ್ದ ಮನೆಗೆಲಸದವರು ಅಸಹಾಯಕ ಪರಿಸ್ಥಿತಿಯಲ್ಲಿ ಸಹಾಯ ಯಾಚಿಸಿದ್ದರಿಂದ ತನ್ನ ದೇಶದ ನಾಗರಿಕರಿಗೆ ಸಹಾಯ ಮಾಡಿತ್ತು ಫಿಲಿಫ್ಫೀನ್ಸ್ ರಾಯಭಾರ ಕಚೇರಿ. ಫಿಲಿಪ್ಪೀನ್ಸ್ ವಿದೇಶಾಂಗ ಕಾರ್ಯದರ್ಶಿ ಅಲನ್ ಪೀಟರ್ ಕಯೆಟನೊ ಅವರು ಹೇಳುವಂತೆ ಇಲ್ಲಿನ ಅನೇಕ ಪ್ರಕರಣಗಳು ಸಾವು-ಬದುಕಿನ ಪ್ರಶ್ನೆಗಳಾಗಿದ್ದವು.

ಫಿಲಿಫ್ಫೀನ್ಸ್ ಅಧ್ಯಕ್ಷ ರೊಡ್ರಿಗೊ ಡುಟೆರ್ಟೆ ಅವರನ್ನು ಭೇಟಿಯಾದ ಕುವೈಟ್ ರಾಯಭಾರಿ ಫಿಲಿಫ್ಫಿನ್ಸ್ ಸಮಜಾಯಿಸಿಯನ್ನು ಕುವೈಟ್ ಸರಕಾರಕ್ಕೆ ತಲುಪಿಸಿದ್ದು, ಕುವೈಟ್ ಫಿಲಿಫ್ಫಿನ್ಸ್ ವಿವರಣೆ ಒಪ್ಪಿದೆ.
ಫಿಲಿಫ್ಫೀನ್ಸ್ ರಾಯಭಾರ ಕಚೇರಿ ನಡೆಸುವ ಅನಾಥಾಲಯಗಳಲ್ಲಿ ಆರು ನೂರು ಸಂತ್ರಸ್ತ ಫಿಲಿಪ್ಪೀನ್ಸ್ ಕಾರ್ಮಿಕರಿದ್ದಾರೆ. 

ಶನಿವಾರ ನಡೆದ ಕಾರ್ಯಾಚರಣೆ ಸಂದರ್ಭ ಸಂತ್ರಸ್ತ ಫಿಲಿಪ್ಪೀನ್ಸ್ ಕಾರ್ಮಿಕರನ್ನು ಅವರು ಕೆಲಸ ಮಾಡುವ ಮಾಲಕರ ಮನೆಗಳಿಂದ ರಕ್ಷಿಸಲಾಗಿತ್ತು. ಮಾಲಕರ ದೌರ್ಜನ್ಯದಿಂದ ತತ್ತರಿಸಿದ್ದ ಫಿಲಿಫ್ಫೀನ್ಸ್ ನಾಗರಿಕರು ತಾವಾಗಿಯೇ ರಾಯಬಾರ ಕಚೇರಿಯ ಸಿಬ್ಬಂದಿಯೊಂದಿಗೆ ಹೋಗಿದ್ದರು.

ಇವರನ್ನೆಲ್ಲ ಶೀಘ್ರದಲ್ಲೇ ದೇಶಕ್ಕೆ ಕಳಿಸಲಾಗುತ್ತದೆ. ದೌರ್ಜನ್ಯ ನಡೆಸಿದ ಮಾಲಕರು ಕಾರ್ಮಿಕರ ಪಾಸ್ಪೋರ್ಟ್ ನೀಡದೇ ಸತಾಯಿಸುತ್ತಿದ್ದಾರೆ. ಮನೆಯೊಂದರ ಫ್ರಿಜ್‌ನಲ್ಲಿ ಕಾರ್ಮಿಕನ ಶವ ಪತ್ತೆಯಾದ ಬಳಿಕ ಫಿಲಿಪ್ಪೀನ್ಸ್ ಅಧ್ಯಕ್ಷರು ತಮ್ಮ ಎಲ್ಲ ಕಾರ್ಮಿಕರನ್ನು ತವರು ದೇಶಕ್ಕೆ ಮರಳಲು ಸೂಚಿಸಿದ್ದನ್ನು ಸ್ಮರಿಸಬಹುದು.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا