Urdu   /   English   /   Nawayathi

ಕುವೈಟ್ ಕ್ಷಮೆ ಕೋರಿದ ಫಿಲಿಫ್ಫೀನ್ಸ್: ಬಡವನ ಸಿಟ್ಟು ದವಡೆಗೆ ಕೇಡಂತೆ?

share with us

ಮನಿಲಾ: 25 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) 'ಬಡವನ ಸಿಟ್ಟು ದವಡೆಗೆ ಕೇಡು' ಎಂಬ ಮಾತನ್ನು ನೀವು ಕೇಳಿರಬಹುದು. ಕುವೈಟ್ ದೇಶದಲ್ಲಿ ಮಾಲಕರಿಂದ ದೌರ್ಜನ್ಯಕ್ಕೊಳಗಾದ ಫಿಲಿಫ್ಫೀನ್ಸ್ ನಾಗರಿಕರನ್ನು ರಕ್ಷಿಸಿದ ರಾಯಭಾರ ಕಚೇರಿಯ ಕ್ರಮಕ್ಕಾಗಿ ಇದೀಗ ಫಿಲಿಫ್ಫೀನ್ಸ್ ಕ್ಷಮೆ ಯಾಚಿಸಿದೆ. ಮನೆಗೆಲಸದ ಕಾರ್ಮಿಕರನ್ನು ಅವರು ಕೆಲಸ ಮಾಡುವ ಮನೆಮಾಲಕರಿಂದ ರಕ್ಷಿಸಿದ ಫಿಲಿಫ್ಫೀನ್ಸ್ ರಾಯಬಾರ ಕಚೇರಿಯ ಕ್ರಮವು ತನ್ನ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಕುವೈಟ್ ಆಡಳಿತ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ ಕ್ಷಮೆ ಕೋರಿದೆ.

ಹಾಗೆ ನೋಡಿದರೆ ಇದು ಫಿಲಿಪ್ಪೀನ್ಸ್ ಕುವೈಟ್ ವಿರುದ್ಧ ಸಿಟ್ಟಿನಿಂದ ಕೈಗೊಂಡ ಕ್ರಮವಾಗಿರಲಿಲ್ಲ. ಕುವೈಟ್‌ನಲ್ಲಿದ್ದ ಮನೆಗೆಲಸದವರು ಅಸಹಾಯಕ ಪರಿಸ್ಥಿತಿಯಲ್ಲಿ ಸಹಾಯ ಯಾಚಿಸಿದ್ದರಿಂದ ತನ್ನ ದೇಶದ ನಾಗರಿಕರಿಗೆ ಸಹಾಯ ಮಾಡಿತ್ತು ಫಿಲಿಫ್ಫೀನ್ಸ್ ರಾಯಭಾರ ಕಚೇರಿ. ಫಿಲಿಪ್ಪೀನ್ಸ್ ವಿದೇಶಾಂಗ ಕಾರ್ಯದರ್ಶಿ ಅಲನ್ ಪೀಟರ್ ಕಯೆಟನೊ ಅವರು ಹೇಳುವಂತೆ ಇಲ್ಲಿನ ಅನೇಕ ಪ್ರಕರಣಗಳು ಸಾವು-ಬದುಕಿನ ಪ್ರಶ್ನೆಗಳಾಗಿದ್ದವು.

ಫಿಲಿಫ್ಫೀನ್ಸ್ ಅಧ್ಯಕ್ಷ ರೊಡ್ರಿಗೊ ಡುಟೆರ್ಟೆ ಅವರನ್ನು ಭೇಟಿಯಾದ ಕುವೈಟ್ ರಾಯಭಾರಿ ಫಿಲಿಫ್ಫಿನ್ಸ್ ಸಮಜಾಯಿಸಿಯನ್ನು ಕುವೈಟ್ ಸರಕಾರಕ್ಕೆ ತಲುಪಿಸಿದ್ದು, ಕುವೈಟ್ ಫಿಲಿಫ್ಫಿನ್ಸ್ ವಿವರಣೆ ಒಪ್ಪಿದೆ.
ಫಿಲಿಫ್ಫೀನ್ಸ್ ರಾಯಭಾರ ಕಚೇರಿ ನಡೆಸುವ ಅನಾಥಾಲಯಗಳಲ್ಲಿ ಆರು ನೂರು ಸಂತ್ರಸ್ತ ಫಿಲಿಪ್ಪೀನ್ಸ್ ಕಾರ್ಮಿಕರಿದ್ದಾರೆ. 

ಶನಿವಾರ ನಡೆದ ಕಾರ್ಯಾಚರಣೆ ಸಂದರ್ಭ ಸಂತ್ರಸ್ತ ಫಿಲಿಪ್ಪೀನ್ಸ್ ಕಾರ್ಮಿಕರನ್ನು ಅವರು ಕೆಲಸ ಮಾಡುವ ಮಾಲಕರ ಮನೆಗಳಿಂದ ರಕ್ಷಿಸಲಾಗಿತ್ತು. ಮಾಲಕರ ದೌರ್ಜನ್ಯದಿಂದ ತತ್ತರಿಸಿದ್ದ ಫಿಲಿಫ್ಫೀನ್ಸ್ ನಾಗರಿಕರು ತಾವಾಗಿಯೇ ರಾಯಬಾರ ಕಚೇರಿಯ ಸಿಬ್ಬಂದಿಯೊಂದಿಗೆ ಹೋಗಿದ್ದರು.

ಇವರನ್ನೆಲ್ಲ ಶೀಘ್ರದಲ್ಲೇ ದೇಶಕ್ಕೆ ಕಳಿಸಲಾಗುತ್ತದೆ. ದೌರ್ಜನ್ಯ ನಡೆಸಿದ ಮಾಲಕರು ಕಾರ್ಮಿಕರ ಪಾಸ್ಪೋರ್ಟ್ ನೀಡದೇ ಸತಾಯಿಸುತ್ತಿದ್ದಾರೆ. ಮನೆಯೊಂದರ ಫ್ರಿಜ್‌ನಲ್ಲಿ ಕಾರ್ಮಿಕನ ಶವ ಪತ್ತೆಯಾದ ಬಳಿಕ ಫಿಲಿಪ್ಪೀನ್ಸ್ ಅಧ್ಯಕ್ಷರು ತಮ್ಮ ಎಲ್ಲ ಕಾರ್ಮಿಕರನ್ನು ತವರು ದೇಶಕ್ಕೆ ಮರಳಲು ಸೂಚಿಸಿದ್ದನ್ನು ಸ್ಮರಿಸಬಹುದು.

ಅನೇಕ ಬಡಪಾಯಿ ಫಿಲಿಫ್ಫೀನ್ಸ್ ನಾಗರಿಕರು ಕುವೈಟ್ ದೇಶದಲ್ಲಿ ತುತ್ತು ಅನ್ನಕ್ಕಾಗಿ ಅಸಹನೀಯ ಪರಿಸ್ಥಿತಿಗಳಲ್ಲಿ ಅತೀ ಕಡಿಮೆ ವೇತನಕ್ಕೆ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಎರಡು ವರ್ಷ ಹಿಂದೆ ಮನೆಗೆಲಸದವರಿಗೆ ವೇತನ ನಿಗದಿ
ಕೇವಲ ಎರಡು ವರ್ಷಗಳ ಹಿಂದಷ್ಟೇ ಕುವೈಟ್ ದೇಶದಲ್ಲಿ ಮನೆಗೆಲಸದವರಿಗೆ 60ದಿನಾರ್(200 ಡಾಲರ್) ಕನಿಷ್ಟ ವೇತನ ನಿಗದಿಪಡಿಸಿ ಆಂತರಿಕ ವ್ಯವಹಾರಗಳ ಸಚಿವ ಶೇಖ್ ಮೊಹ್ಮದ್ ಅಲ್-ಖಲೀದ್ ಅಲ್ ಸಭಾ ಮಹತ್ವದ ನಿರ್ಧಾರ ಪ್ರಕಟಿಸಿದ್ದರು. ಇದು ಖಾಸಗಿ ಚಾಲಕರು, ಅಡಿಗೆ ಕೆಲಸದವರು ಮತ್ತು ಬೇಬಿ ಸಿಟ್ಟರ್ಸ್ಗಳಿಗೂ ಅನ್ವಯಿಸುತ್ತದೆ.

ಇದಲ್ಲದೇ ಮನೆಗೆಲಸದವರಿಗೆ ವಾರಕ್ಕೆ ಒಂದು ದಿನ ರಜೆ, ದಿನಕ್ಕೆ ಹನ್ನೆರಡು ಗಂಟೆಗಳ ಕೆಲಸದ ಬಳಿಕ ವಿರಾಮ, ವಾರ್ಷಿಕ 30ದಿನಗಳ ರಜೆ, ಓವರ್ಟೈಮ್ ಭತ್ಯೆ, ಗುತ್ತಿಗೆ ಅವಧಿ ಮುಗಿದ ಬಳಿಕ ವಿಶೇಷ ಸೌಲಭ್ಯವಾಗಿ ಒಂದು ತಿಂಗಳ ಸಂಬಳ ನೀಡಬೇಕಾಗಿದೆ.

ಇಪ್ಪತ್ತು ವರ್ಷಗಳಿಂತ ಕೆಳಗಿನವರು ಮತ್ತು ಐವತ್ತು ವರ್ಷಗಳಿಗಿಂತ ಮೇಲ್ಪಟ್ಟವರನ್ನು ಮನೆಗೆಲಸಕ್ಕೆ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿತ್ತು. ನಾಲ್ವರು ಸದಸ್ಯರ ಒಂದು ಕುಟುಂಬಕ್ಕೆ ಓರ್ವ ಮನೆಗೆಲಸದವರನ್ನು, ಐದರಿಂದ ಎಂಟು ಸದಸ್ಯರ ಕುಟುಂಬಕ್ಕೆ ಇಬ್ಬರು ಮನೆಗೆಲಸದವರು, ಅಂತೆಯೇ ಎಂಟು ಜನಕ್ಕಿಂತ ಅಧಿಕ ಸದಸ್ಯರ ಕುಟುಂಬವು ಮೂವರು ಮನೆಗೆಲಸದವರ್ನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿತ್ತು.


ವಿದೇಶಿ ಮನೆಗೆಲಸದವರನ್ನು ನೇಮಿಸಿಕೊಳ್ಳುವ ಸಂದರ್ಭ ಕಛೇರಿಗಳು 40,000ಕುವೈಟಿ ದಿನಾರ್ಗಳನ್ನು ಭದ್ರತೆ ರೂಪದಲ್ಲಿ ನೀಡಬೇಕಾಗುತ್ತದೆ ಎಂದು ಸಚಿವಾಲಯ ಆದೇಶ ಹೊರಡಿಸಿತ್ತು. ಇದನ್ನು ಎರಡು ವರ್ಷಗಳಿಗೊಮ್ಮೆ ನವೀಕರಿಸಬೇಕು ಎಂದು ಸ್ಪಷ್ಟ ಆದೇಶ ನೀಡಿತ್ತು.

ಕುವೈಟ್ ದೇಶದಲ್ಲಿ ಆರು ಲಕ್ಷಕ್ಕೂ ಅಧಿಕ ಮನೆಗೆಲಸದವರಿದ್ದಾರೆಂದು ಅಂದಾಜಿಸಲಾಗಿದ್ದು, ಅವರ ಹಕ್ಕುಗಳ ರಕ್ಷಣೆಗೆ ಯಾವುದೇ ಕಾನೂನು ಇಲ್ಲ ಎಂಬುದು ಇದುವರೆಗೆ ವ್ಯಾಪಕ ಟೀಕೆಗೊಳಗಾಗಿತ್ತು. ಇದೀಗ ಕುವೈಟ್ ಗಲ್ಫ್ ದೇಶಗಳಲ್ಲೇ ಪ್ರಪ್ರಥಮ ಬಾರಿಗೆ ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿಪಡಿಸುವ ಮೂಲಕ ಇತರ ಗಲ್ಫ್ ದೇಶಗಳ ಗಮನ ಸೆಳೆದಿದೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا