Urdu   /   English   /   Nawayathi

ಟೆಕಿಗೆ ಲೈಂಗಿಕ ಕಿರುಕುಳ: ಬಂಧನ

share with us

ಬೆಂಗಳೂರು: 24 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಮಹಿಳಾ ಟೆಕಿಯೊಬ್ಬರ ಜತೆ ಜಗಳ ತೆಗೆದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ನಾಲ್ವರನ್ನು ಜೀವನ್‌ಬಿಮಾ ನಗರ ಪೊಲೀಸರು ಬಂಧಿಸಿದ್ದಾರೆ. ಎಚ್ಎಸ್ಆರ್ ಲೇಔಟ್ ನಿವಾಸಿ ಸಂತೋಷ್ ಗೌಡ, ಕೋಡಿಹಳ್ಳಿಯ ಅಜಯ್, ಮಹೇಶ್ ಹಾಗೂ ಮುರುಗೇಶಪಾಳ್ಯದ ನವೀನ್ ಬಂಧಿತರು. ಘಟನೆ ಸಂಬಂಧ ಸಂತ್ರಸ್ತೆಯ ಸಹೋದ್ಯೋಗಿ ಅರ್ಜುನ್‌, ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದರು. ಅದನ್ನು ಆಧರಿಸಿ, ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಡಿಸಿಪಿ ಅಜಯ್‌ ಹಿಲೋರಿ ತಿಳಿಸಿದರು.

ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ, ಅರ್ಜುನ್‌ ಜತೆಯಲ್ಲಿ ಏ.14ರಂದು ಮಧ್ಯಾಹ್ನ ಊಟಕ್ಕೆ ಹೋಗಿದ್ದರು. ಅದನ್ನು ಮುಗಿಸಿಕೊಂಡು ವಾಪಸ್‌ ಕಚೇರಿಗೆ ಹೊರಟಿದ್ದರು. ಪಾನಮತ್ತರಾಗಿ ರಸ್ತೆಯಲ್ಲಿ ನಿಂತುಕೊಂಡಿದ್ದ ಆರೋಪಿಗಳು, ಸಂತ್ರಸ್ತೆಯನ್ನು ತಡೆದು ಕೈ ಹಿಡಿದು ಎಳೆದಿದ್ದರು. ಆಗ ಸಂತ್ರಸ್ತೆ, ಒಬ್ಬಾತನ ಕಪಾಳಕ್ಕೆ ಹೊಡೆದಿದ್ದರು ಎಂದು ಪೊಲೀಸರು ಹೇಳಿದರು.

‘ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದ ಆರೋಪಿಗಳು, ಜಗಳ ತೆಗೆದಿದ್ದರು. ಸಂತ್ರಸ್ತೆಯ ಟೀ– ಶರ್ಟ್‌ ಹಿಡಿದು ಎಳೆದಾಡಿದ್ದರು. ಈ ಸಂಬಂಧ ಪೋಸ್ಟ್‌ ಪ್ರಕಟಿಸಿದ್ದ ಅರ್ಜುನ್, ‘ನಾನು ಭಾರತೀಯ ಎಂದು ಹೇಳಿಕೊಳ್ಳಲು ಅಸಹ್ಯವಾಗುತ್ತಿದೆ. ತಾಯಿ, ಸಹೋದರಿಯರಿಗೆ ಇಲ್ಲಿ ರಕ್ಷಣೆ ಇಲ್ಲದ ಸ್ಥಿತಿ ಇದೆ. ಕಾಶ್ಮೀರದಲ್ಲಿ 8 ವರ್ಷದ ಬಾಲಕಿಮೇಲೆ ಅತ್ಯಾಚಾರ ನಡೆದಿದ್ದು, ಉಳಿದ ರಾಜ್ಯಗಳಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅಂಥ ಘಟನೆಯನ್ನು ನಾನು ಕಣ್ಣಾರೆ ಕಂಡೆ’ ಎಂದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದೆವು ಎಂದರು.
**
ರಜೆ ಮೇಲೆ ಹೋದ ಟೆಕಿ 
‘ಘಟನೆ ಬಳಿಕ ಮಹಿಳಾ ಟೆಕಿ ಹಾಗೂ ಸಹೋದ್ಯೋಗಿ, ಕೆಲಸಕ್ಕೆ ರಜೆ ಹಾಕಿ ತಮ್ಮೂರಿಗೆ ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಸಂತ್ರಸ್ತೆಗೆ ತಿಳಿಸಿದ್ದೇವೆ. ಅವರು ಮಂಗಳವಾರ ನಗರಕ್ಕೆ ಬರುವುದಾಗಿ ಹೇಳಿದ್ದಾರೆ. ಬಂದ ಬಳಿಕ ಹೇಳಿಕೆ ಪಡೆದುಕೊಳ್ಳಲಿದ್ದೇವೆ’ ಎಂದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا