Urdu   /   English   /   Nawayathi

ಏರ್ ಇಂಡಿಯಾಗೆ ಮಾಸಿಕ 250 ಕೋಟಿ ರೂ. ನಗದು ಕೊರತೆ

share with us

ನವದೆಹಲಿ: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಸಮಸ್ಯೆಗಳ ಸುಳಿಗೆ ಸಿಲುಕಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಲ್ಲಿ ಹಣದ ಅಭಾವ ತೀವ್ರವಾಗಿ ಕಾಡುತ್ತಿದೆ. ಪ್ರತಿ ತಿಂಗಳು 200-250 ಕೋಟಿ ರೂ.ಗಳ ನಗದು ಕೊರತೆಯಿಂದಾಗಿ ಅಗತ್ಯವಾದ ಬಿಡಿಭಾಗಗಳನ್ನು ಖರೀದಿಸಲಾಗದೇ ವಿಮಾನಗಳು ಸ್ಥಗಿತಗೊಳ್ಳಲು ಕಾರಣವಾಗಿದೆ. ಈ ಸಂಗತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಕೊಂಡಿದೆ.
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಗೆ ಈ ವಿಷಯ ತಿಳಿಸಿರುವ ಸಚಿವಾಲಯವು ನಗದು ಪ್ರವಹಿಸುವಿಕೆ ಮೇಲೆ ನಿರ್ಬಂಧ ಹೇರಿರುವುದರಿಂದ ವಿಮಾನಗಳು ಸ್ಥಗಿತಗೊಳ್ಳಲು ಕಾರಣವೆಂದು ಸ್ಪಷ್ಟಪಡಿಸಿದೆ.

ಈ ಹಿಂದೆ ವಿಮಾನಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ-ಅವ್ಯವಹಾರಗಳ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆ ನಡೆಸುತ್ತಿರುವುದರಿಂದ ವಿಮಾನಗಳ ವಿಸ್ತರಣೆಗೆ ತೊಡಕಾಗಿದೆ ಎಂದು ಸಚಿವಾಲಯ ತಿಳಿಸಿದೆ. ವಿಮಾನದ ಬಳಕೆ ಸುಧಾರಣೆಗಾಗಿ ಬಿಡಿ ಭಾಗಗಳ ಲಭ್ಯತೆಗಾಗಿ ಗರಿಷ್ಠ ಹಣಕಾಸು ಸಂಪನ್ಮೂಲಗಳನ್ನು ಉಪಯೋಗಿಸಲಾಗುತ್ತಿದೆಯಾದರೂ, ನಗದು ಕೊರತೆ ಎದುರಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا