Urdu   /   English   /   Nawayathi

ನಾಳೆ ಕಮಲ ಇಳಿಸಿ 'ಕೈ' ಹಿಡಿಯುತ್ತಾರೆ ಬೇಳೂರು!

share with us

ಬೆಂಗಳೂರು: 19 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಸಾಗರದಿಂದ ಬಿಜೆಪಿ ಟಿಕೆಟ್‌‌‌ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಕಾಂಗ್ರೆಸ್‌‌ಗೆ ಸೇರ್ಪಡೆಯಾಗಲಿದ್ದಾರೆ. ಯಾವುದೇ ಷರತ್ತಿಲ್ಲದೇ ಅವರು ಕಾಂಗ್ರೆಸ್‌‌ಗೆ ಸೇರ್ಪಡೆಯಾಗಿದ್ದು, ತಮ್ಮ ಮಾವ ಹಾಗೂ ಕಾಂಗ್ರೆಸ್‌‌ ಅಭ್ಯರ್ಥಿಯಾಗಿರುವ ಕಾಗೋಡು ತಿಮ್ಮಪ್ಪ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ನಾಳೆ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌‌ ವರಿಷ್ಠರ ಸಮ್ಮುಖದಲ್ಲಿ ಕೈ ಹಿಡಿಯುವುದಾಗಿ ತಿಳಿಸಿದ್ದಾರೆ.
ನಾನು ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌‌ ಅವರೊಂದಿಗೆ ಚರ್ಚಿಸಿದ್ದೇನೆ. ಕಾಂಗ್ರೆಸ್‌‌ ಸೇರುವುದು ಖಚಿತವಾಗಿದೆ ಎಂದಿದ್ದಾರೆ.

ಬೇಳೂರು ಎಂದರೆ ಬಿಎಸ್‌‌ವೈಗೆ ಭಯ ಇದೆ. ಬಿಜೆಪಿ ಪಕ್ಷದಲ್ಲಿ ಎಲ್ಲರೂ ನಮ್ಮವರೇ. ಆದರೆ ಬಿಎಸ್‌ವೈ ಹಾಗೂ ಅವರ ಮಗ ನನಗೆ ಸಿಗಬೇಕಿದ್ದ ಟಿಕೆಟ್‌‌ ತಪ್ಪಿಸಿದ್ದಾರೆ. ಬಿಜೆಪಿ ಟಿಕೆಟ್‌‌ ಹಂಚಿಕೆ ಸಂದರ್ಭ ನಮ್ಮ ಕ್ಷೇತ್ರದಲ್ಲಿ ಯಾವುದೇ ಸರ್ವೆ ನಡೆದಿಲ್ಲ. ಎಲ್ಲವೂ ಬಿಎಸ್‌‌ವೈ ಬೋಗಸ್ ಸರ್ವೆ ಎಂದು ಲೇವಡಿ ಮಾಡಿದ್ದಾರೆ. 

ಕ್ಷೇತ್ರದಲ್ಲಿ ಹಾಲಪ್ಪ ಗೆಲುವು ನಿಜವಾದ ಗೆಲುವಲ್ಲ. ಅಣ್ಣ ತಮ್ಮಂದಿರ ಕದನದಲ್ಲಿ ಅವರಿಗೆ ಗೆಲುವಾಗಿತ್ತು. ಅವನೇನು ಗಟ್ಟಿ ಮನುಷ್ಯ ಅಲ್ಲ. ಮಧ್ಯದಲ್ಲಿ ತೂರಿಕೊಂಡು ಬಂದವ ಅವ. ಅಣ್ಣ ತಮ್ಮ ತಲಾ 30 ಸಾವಿರದಂತೆ 60 ಸಾವಿರ ಮತ ಪಡೆದರು. ಇವರು 33 ಸಾವಿರ ಮತ ಗಳಿಸಿ ಗೆದ್ದರು. ಅಂತಹ ಲಾಭ ಆಗಬಾರದು ಎನ್ನುವ ಉದ್ದೇಶಕ್ಕೆ ನಾನು 'ಕೈ' ಸೇರುವ ನಿರ್ಧಾರ ಮಾಡಿದ್ದೇನೆ. ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೇ ನನ್ನ ಗುರಿ ಎಂದು ಹೇಳಿದ್ದಾರೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا