Urdu   /   English   /   Nawayathi

ಮುಫ್ತಿ ಸಂಪುಟಕ್ಕೆ ಬಿಜೆಪಿ ಸಚಿವರ ರಾಜೀನಾಮೆ?

share with us

ಹೊಸದಿಲ್ಲಿ: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮಹತ್ವದ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮೈತ್ರಿ ಸರಕಾರಕ್ಕೆ ರಾಜೀನಾಮೆ ನೀಡಲು ಬಿಜೆಪಿ ತನ್ನ 9 ಮಂದಿ ಸಚಿವರಿಗೆ ಸೂಚಿಸಿದೆ. ಆದರೆ ಪಿಡಿಪಿ ಸರಕಾರಕ್ಕೆ ಬೆಂಬಲ ಮುಂದುವರಿಯಲಿದೆ. ಮೂಲಗಳ ಪ್ರಕಾರ ಹೊಸ ಮುಖಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕ್ರಮ ಎಂದು ಹೇಳಲಾಗುತ್ತಿದೆ. ಕಥುವಾ ಪ್ರಕರಣದ ಆರೋಪಿಗಳ ಪರ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಬಿಜೆಪಿಯ ಇಬ್ಬರು ಸಚಿವರು ತ್ಯಾಗಪತ್ರ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸಿಬಿಐಗೆ ವಹಿಸಿ: ಇದೇ ವೇಳೆ,  ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿಗಳ ಪರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ನಾಯಕ ಲಾಲ್‌ ಸಿಂಗ್‌ ಮಂಗಳವಾರ ಕಣಿವೆ ರಾಜ್ಯದಲ್ಲಿ ರ್ಯಾಲಿ ನಡೆಸಿ, ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

ಮತ್ತೂಂದು ಹೀನ ಕೃತ್ಯ: ಕಥುವಾ, ಉನ್ನಾವ್‌ ಪ್ರಕರಣಗಳು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ನಡುವೆಯೇ, ಉತ್ತರಪ್ರದೇಶದ ಇಟಾವ್‌ನಲ್ಲಿ ಮತ್ತೂಂದು ಹೀನ ಕೃತ್ಯ ವರದಿಯಾಗಿದೆ. ಮದುವೆ ಸಮಾರಂಭವೊಂದಕ್ಕೆ ಬಂದಿದ್ದ 7 ವರ್ಷದ ಬಾಲಕಿಯನ್ನು 19 ವರ್ಷದ ಯುವಕನೊಬ್ಬ ಅಪಹರಿಸಿ, ಅತ್ಯಾಚಾರಗೈದು, ಕೊಲೆ ಮಾಡಿದ್ದಾನೆ. 

ಪತ್ರಕರ್ತೆ ವಿರುದ್ಧ ಕೇಸು
ಕಥುವಾ ಪ್ರಕರಣ ಖಂಡಿಸಿ ವ್ಯಂಗ್ಯಚಿತ್ರವೊಂದನ್ನು ಬರೆದು, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ ಹೈದರಾಬಾದ್‌ನ ಪತ್ರಕರ್ತೆ ವಿರುದ್ಧ ಮಂಗಳವಾರ ಕೇಸು ದಾಖಲಿಸಲಾಗಿದೆ. ಪತ್ರಕರ್ತೆ ಸ್ವಾತಿ ವದ್ಲಾಮುಡಿ ಅವರು ಶ್ರೀರಾಮನ ಭಕ್ತರಿಗೆ ಅವಮಾನವಾಗುವಂಥ ಕಾರ್ಟೂನ್‌ ಬರೆದಿದ್ದು, ಇದರಿಂದ ದೇಶದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹಿಂದೂ ಸಂಘಟನೆಯೊಂದರ ಅಧ್ಯಕ್ಷ ಮತ್ತು ವಕೀಲರಾದ ಕಾಶಿಮ್‌ಶೆಟ್ಟಿ ಕರುಣ ಸಾಗರ್‌ ದೂರು ದಾಖಲಿಸಿದ್ದಾರೆ. ಸ್ವಾತಿ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ 'ಸದ್ಯ ನನ್ನನ್ನು ರಾವಣ ಅಪಹರಿಸಿದ. ನಿಮ್ಮ ಭಕ್ತರು ಅಪಹರಿಸಲಿಲ್ಲ ಎನ್ನುವುದೇ ನೆಮ್ಮದಿಯ ಸಂಗತಿ' ಎಂದು ಸೀತೆ ರಾಮನಿಗೆ ಹೇಳುವಂಥ ಕಾರ್ಟೂನ್‌ ಹಾಕಿಕೊಂಡಿದ್ದರು. ಇದು ವೈರಲ್‌ ಆಗಿತ್ತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا