Urdu   /   English   /   Nawayathi

ಮಧ್ಯ ಪ್ರದೇಶದಲ್ಲಿ ನದಿಗೆ ಉರುಳಿದ ಮದುವೆ ದಿಬ್ಬಣದ ಮಿನಿಟ್ರಕ್‌ ; 21 ಸಾವು

share with us

ಭೋಪಾಲ್‌: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮಿನಿಟ್ರಕ್‌ವೊಂದು ನದಿಗೆ ಉರುಳಿ 21 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಮೆಲಿಯಾ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಸೇತುವೆ ಮೇಲಿಂದ ಸೋನೆ ನದಿಗೆ ಮಿನಿಟ್ರಕ್‌ ಉರುಳಿದೆ. ಮದುವೆ ಸಂಭ್ರಮದಲ್ಲಿದ್ದವರು ಸಿಂಗ್ರೌಲಿ ಜಿಲ್ಲೆಯಿಂದ ಸಿಧಿ ಕಡೆಗೆ ಮಿನಿಟ್ರಕ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ದಿಬ್ಬಣದಲ್ಲಿದ್ದ 45 ಜನರ ಪೈಕಿ 21 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹರಬಿರ್ಜಿ ಗ್ರಾಮದ ಮುಜಾಬಿಲ್‌ ಖಾನ್‌ ದಿಬ್ಬಣ ಸಿಧಿಯ ಪಮಾರಿಯಾ ಗ್ರಾಮಕ್ಕೆ ಔತಣಕ್ಕಾಗಿ ಪ್ರಯಾಣಿಸುತ್ತಿತ್ತು. ರಾತ್ರಿ 9:30ರ ಸುಮಾರಿಗೆ ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆ ಕಂಬಿಗಳನ್ನು ಮುರಿದು 100 ಅಡಿಗಳಷ್ಟು ಕೆಳಗೆ ಉರುಳಿದೆ.

ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮೃತರ ಕುಟುಂಬಗಳಿಗೆ ₹2 ಲಕ್ಷ ಹಾಗೂ ಗಾಯಗೊಂಡಿರುವವರಿಗೆ ₹50 ಸಾವಿರ ಪರಿಹಾರ ಮೊತ್ತು ಘೋಷಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا