Urdu   /   English   /   Nawayathi

ಇರಾನಿ ಗ್ಯಾಂಗ್‌ನ ಸದಸ್ಯರ ಸೆರೆ

share with us

ಬೆಂಗಳೂರು: 15 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮನೆಗಳಿಗೆ ಕನ್ನ ಹಾಕುತ್ತಿದ್ದ ಹಾಗೂ ಮಹಿಳೆಯರ ಸರಗಳವು ಮಾಡುತ್ತಿದ್ದ ಆರೋಪದಡಿ ಇರಾನಿ ಗ್ಯಾಂಗ್‌ನ ಸದಸ್ಯರಿಬ್ಬರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.‌ ಮಹಾರಾಷ್ಟ್ರದ ಅಲ್ರೇನ್‌ ನಗರದ ಫರ್ಮಾನ್‌ ಅಲಿ (25) ಹಾಗೂ ಕಲಬುರ್ಗಿಯ ಬಾಕರ್‌ ಅಲಿ (30) ಬಂಧಿತರು. ಅವರಿಂದ 31.92 ಲಕ್ಷ ಮೌಲ್ಯದ 1.83 ಕೆ.ಜಿ ತೂಕದ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ.

‘ಒಂದು ವರ್ಷದಿಂದ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ವಿವಿಧೆಡೆ 22 ಪ್ರಕರಣಗಳು ದಾಖಲಾಗಿವೆ. ಬಸ್‌ ಹಾಗೂ ರೈಲಿನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ರಸ್ತೆ ಬದಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು, ಅದರಲ್ಲೇ ಸುತ್ತಾಡಿ ಮಹಿಳೆಯರ ಸರಗಳವು ಮಾಡುತ್ತಿದ್ದರು. ಬಳಿಕ, ನಿಲ್ದಾಣಗಳಲ್ಲಿ ಬೈಕ್‌ಗಳನ್ನು ನಿಲ್ಲಿಸಿ ತಮ್ಮೂರಿಗೆ ಹೊರಟು ಹೋಗುತ್ತಿದ್ದರು. ಬಾಗಿಲು ಹಾಕಿರುವ ಮನೆಗಳಿಗೆ ಹೋಗಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا