Urdu   /   English   /   Nawayathi

ಬಿಜೆಪಿ ಶಾಸಕ ನ್ಯಾಯಾಂಗ ಬಂಧನ

share with us

ನವದೆಹಲಿ: 15 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ಶನಿವಾರ ಶಶಿ ಸಿಂಗ್ ಎನ್ನುವ ಮಹಿಳೆಯನ್ನು ಬಂಧಿಸಿದೆ. ಅಪರಾಧ ನಡೆದ ದಿನ ಸಂತ್ರಸ್ತೆಯನ್ನು ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಬಳಿ ಕರೆದುಕೊಂಡು ಹೋಗಿದ್ದು ಇದೇ ಮಹಿಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೆಂಗರ್‌ನನ್ನು ಲಖನೌದ ವಿಶೇಷ ನ್ಯಾಯಾಲಯ ಏಳು ದಿನ ಸಿಬಿಐ ವಶಕ್ಕೆ ಒಪ್ಪಿಸಿದೆ.

ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನಲ್ಲಿ, ‘ಶಶಿ ಸಿಂಗ್ ತನ್ನ ಮಗಳಿಗೆ ಆಮಿಷ ಒಡ್ಡಿ ಶಾಸಕನ ಮನೆಗೆ ಕರೆದೊಯ್ದಿದ್ದಳು. ಮಗಳ ಮೇಲೆ ಶಾಸಕ ಅತ್ಯಾಚಾರ ಎಸಗುವ ವೇಳೆ ಈಕೆ ಕೋಣೆಯ ಹೊರಗೆ ಕಾವಲು ನಿಂತಿದ್ದಳು’ ಎಂದು ಉಲ್ಲೇಖಿಸಲಾಗಿತ್ತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا