Urdu   /   English   /   Nawayathi

ಅತ್ಯಾಚಾರ ವಿರುದ್ಧ ಒಗ್ಗಟ್ಟು

share with us

ಜಮ್ಮು/ಲಕ್ನೋ: 15 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕಥುವಾದ ದುರ ದೃಷ್ಟಕರ ಘಟನೆ ಇಡೀ ದೇಶವನ್ನೇ ಅತ್ಯಾಚಾರದ ವಿರುದ್ಧ ಒಂದಾಗುವಂತೆ ಮಾಡಿತು. ತಮ್ಮ ಮಾತುಗಳ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು ಎಂದು ಜಮ್ಮು -ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಮತ್ತು ಉ.ಪ್ರದೇಶದ ಉನ್ನಾವ್‌ನಲ್ಲಿ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮುಫ್ತಿ ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಕಥುವಾ ಘಟನೆಯ ಆರೋಪಿಗಳ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಇಬ್ಬರು ಸಚಿವರ ರಾಜೀನಾಮೆ ಪತ್ರವನ್ನು ರಾಜ್ಯಪಾಲ ವೊಹ್ರಾಗೆ ಕಳುಹಿಸಲಾಗಿದ್ದು, ಅವರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದಿದ್ದಾರೆ. ಶನಿವಾರ ಬಿಜೆಪಿ ಮತ್ತು ಪಿಡಿಪಿ ಪ್ರತ್ಯೇಕವಾಗಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಘಟನೆ ಬಗ್ಗೆ ಮುಫ್ತಿ ಚರ್ಚಿಸಿದ್ದಾಗಿ ತಿಳಿಸಿದ್ದಾರೆ. ಇನ್ನೊಂದೆಡೆ, ಉನ್ನಾವ್‌ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಆರೋಪಿ, ಬಿಜೆಪಿ ಶಾಸಕ ಕುಲ್‌ದೀಪ್‌ ಸಿಂಗ್‌ ಸೆಂಗಾರ್‌ ಬಳಿ ಕರೆದೊಯ್ದಿದ್ದ ಶಶಿ ಸಿಂಗ್‌ ಎಂಬಾಕೆಯನ್ನು ಸಿಬಿಐ ಬಂಧಿಸಿದೆ. ಬಂಧಿತ ಸೆಂಗಾರ್‌ರನ್ನು ನ್ಯಾಯಾಲಯ 7 ದಿನಗಳ ಸಿಬಿಐ ವಶಕ್ಕೆ ಒಪ್ಪಿಸಿದೆ.

ಪರಿಸ್ಥಿತಿ ಶಾಂತಗೊಳಿಸಲು ತೆರಳಿದ್ದೆ: ಕಥುವಾ ಅತ್ಯಾಚಾರ ಆರೋಪಿ ಪರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ನಾಯಕ ಚೌಧರಿ ಲಾಲ್‌ ಸಿಂಗ್‌ ಶನಿವಾರ, ತಾವು ಪರಿಸ್ಥಿತಿಯನ್ನು ಶಾಂತಗೊಳಿಸಿ, ಸಹಜಸ್ಥಿತಿಗೆ ತರಲೆಂದು ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ. 

ಮತ್ತೂಂದು ಭೀಕರ ಘಟನೆ: ಕಥುವಾ, ಉನ್ನಾವ್‌ ಬಳಿಕ ಇದೀಗ ಸೂರತ್‌ನಲ್ಲಿ ಶನಿವಾರ 7 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರಗೈದು, ಚಿತ್ರಹಿಂಸೆ ನೀಡಿ ಕೊಲೆಗೈದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಖಾಸಗಿ ಅಂಗಾಂಗ ಸೇರಿದಂತೆ ಶರೀರವಿಡೀ 80ಕ್ಕೂ ಹೆಚ್ಚು ಗಾಯಗಳು ಕಂಡುಬಂದಿವೆ.

ಕೊಲೆ ಸಮರ್ಥಿಸಿದ್ದ ಮ್ಯಾನೇಜರ್‌ ವಜಾ 
ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಸಮರ್ಥಿಸಿಕೊಂಡಿದ್ದ ಖಾಸಗಿ ಬ್ಯಾಂಕ್‌ವೊಂದರ ಕೊಚ್ಚಿ ಶಾಖೆಯ ಸಹಾಯಕ ಮ್ಯಾನೇಜರ್‌ ವಿಷ್ಣು ನಂದಕುಮಾರ್‌ ಎಂಬಾತನನ್ನು ಸೇವೆಯಿಂದ ವಜಾ ಮಾಡಲಾಗಿದೆ. "ಬಾಲಕಿಯನ್ನು ಈ ವಯಸ್ಸಲ್ಲೇ ಕೊಂದಿದ್ದು ಒಳ್ಳೆಯದಾಯ್ತು. ಹಾಗೇ ಬಿಟ್ಟಿದ್ದರೆ, ಆಕೆ ದೊಡ್ಡವಳಾಗಿ ಭಾರತದ ಮೇಲೆ ಬಾಂಬ್‌ ದಾಳಿ ನಡೆಸುತ್ತಿದ್ದಳು' ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದ. ಇದು ವೈರಲ್‌ ಆಗಿ ವಿವಾದ ಎಬ್ಬಿಸಿತ್ತು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا