Urdu   /   English   /   Nawayathi

ಮೋದಿ ಹೊಗಳಿ, ನಿರಾಕರಿಸಿದ ಥಾಮಸ್‌

share with us

ಕೊಚ್ಚಿ: 15 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತಗಾರ. ಅವರ ನಿರ್ಧಾರಗಳು ಸರಿಯಾಗಿರಲಿ ಅಥವಾ ತಪ್ಪಾಗಿರಲಿ, ಅದನ್ನು ಜಾರಿಗೊಳಿಸುವ ಧೈರ್ಯ ತೋರಿಸಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ಕೆ.ವಿ.ಥಾಮಸ್‌ ಕೊಚ್ಚಿಯಲ್ಲಿ ಮ್ಯಾನೇಜ್‌ಮೆಂಟ್‌ ಸಂಬಂಧಿ ಸಮ್ಮೇಳನವೊಂದರಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ. ನಂತರ, ನಾನು ಮೋದಿ ಉತ್ತಮ ಆಡಳಿತಗಾರ ಎಂಬುದಾಗಿ ಹೇಳಿಲ್ಲ. ಜಿಎಸ್‌ಟಿ ಹಾಗೂ ನೋಟು ಅಮಾನ್ಯದಂಥ ಕ್ರಮಗಳನ್ನು ಅವರ ಆಡಳಿತಾತ್ಮಕ ಕ್ರಮಗಳಿಂದ ಉತ್ತಮವಾಗಿ ನಿರ್ವಹಿಸಬಹುದಾಗಿತ್ತು ಎಂದು ಹೇಳಿದ್ದೆ ಎಂದು ಥಾಮಸ್‌ ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕ ಖಾತೆ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಥಾಮಸ್‌ಗೆ ಇದೀಗ, ಕಾಂಗ್ರೆಸ್‌ ವಿವರಣೆ ಕೋರಿ ನೋಟಿಸ್‌ ಕಳುಹಿಸಿದೆ. ಮೋದಿ ಹೊಗಳಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಯೇ ಎಂಬುದನ್ನು ಥಾಮಸ್‌ ಸ್ಪಷ್ಟಪಡಿಸಬೇಕು ಎಂದು ಕೇರಳ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ.ಹಸನ್‌ ಹೇಳಿದ್ದಾರೆ.
ಉ, ವಾ ವರದಿ 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا