Urdu   /   English   /   Nawayathi

ಆಲ್ಜೀರಿಯಾ ಮಿಲಿಟರಿ ವಿಮಾನ ಪತನ: 100ಕ್ಕೂ ಹೆಚ್ಚು ಸಾವು ಸಾಧ್ಯತೆ

share with us

ಅಲ್ಜೀರ್ಸ್‌: 11 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ನೂರಕ್ಕೂ ಹೆಚ್ಚು ಸೈನಿಕರನ್ನೊಳಗೊಂಡಿದ್ದ ಅಲ್ಜೀರಿಯಾದ ಸೇನಾ ವಿಮಾನ ಅಲ್ಜೀರಿಯಾದ ರಾಜಧಾನಿ ಅಲ್‌ಜೀರ್‌ಸ್‌ನ ಬೌಫಾರಿರ್ಕ್‌ ವಿಮಾನ ನಿಲ್ದಾಣದ ಬಳಿ ಪತನಗೊಂಡಿದೆ. ವಿಮಾನ ಪತನಗೊಂಡ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವ ದೃಶ್ಯವನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ವಿಮಾನ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಹಾಗೂ ಜನಸಂದಣಿ ಇರುವುದೂ ದೃಶ್ಯಗಳಲ್ಲಿ ಕಾಣಿಸಿದೆ. ವಿಮಾನದ ಬಾಲದ ತುದಿಯ ತುಣುಕು ಆಲಿವ್‌ ಮರದ ಮೇಲೆ ಸಿಕ್ಕಿಹಾಕಿಕೊಂಡಿದೆ. ನೈಋತ್ಯ ಆಲ್ಜೀರಿಯಾದ ಬೆಚಾರ್‌ನತ್ತ ಈ ವಿಮಾನ ಹೊರಟಿದ್ದಾಗ ದುರಂತ ಸಂಭವಿಸಿದೆ.

ದುರಂತದಲ್ಲಿ ಮಿಲಿಟರಿ ಸಿಬ್ಬಂದಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.  ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا