Urdu   /   English   /   Nawayathi

ಭೀಮಾನಾಯ್ಕ್ ಟಿಕೆಟ್‌ಗೆ ಖರ್ಗೆ ಅಡ್ಡಿ

share with us

ಬಳ್ಳಾರಿ: 11 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ್ನು ಮಾಜಿ ಶಾಸಕ ಭೀಮಾನಾಯ್ಕ್ ಅವರಿಗೆ ನೀಡಲು ಸಂಸತ್ ನಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಡ್ಡಿಪಡಿಸಿದ್ದು ಭೀಮಾನಾಯ್ಕ್ ಅವರಿಗೆ ಟಿಕೆಟ್ ದೊರೆಯುವುದು ಅನುಮಾನವಾಗಿದೆ. ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಪರಿಶೀಲನಾ ಸಮಿತಿ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿ ಒಬ್ಬರಿಗೆ ಟಿಕೆಟ್ ನೀಡಬೇಕು. ಹಗರಿಬೊಮ್ಮನಹಳ್ಳಿ, ಹಡಗಲಿ ಮಾತ್ರ ಎಸ್ಸಿ ಮೀಸಲಾತಿಯ ಕ್ಷೇತ್ರಗಳಾಗಿವೆ. ಹಡಗಲಿಯಲ್ಲಿ ಪಕ್ಷದ ನಿಷ್ಠಾವಂತರಾಗಿರುವ ಮತ್ತು ಮಾಜಿ ಸಚಿವ ಪರಮೇಶ್ವರನಾಯ್ಕ್ ಇದ್ದಾರೆ. ಇನ್ನು ಹಗರಿಬೊಮ್ಮನಹಳ್ಳಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅಸ್ಪೃಶ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕ್ಷೇತ್ರದಲ್ಲಿ ಅದೇ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಬೇಕೆಂದು ಖರ್ಗೆ ಅವರು ತೀವ್ರ ಬಿಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಪಕ್ಷಾಂತರಿ ಆಗಿರುವ, ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅವರೇನು ಸುಮ್ಮನೆ ಓಟು ಹಾಕಿಲ್ಲ. ಅಲ್ಲದೆ ನನ್ನಂತಹ ಹಿರಿಯ ರಾಜಕಾರಣಿ ಕೊಟ್ಟೂರಿನಲ್ಲಿ ನಡೆದ ರೈಲ್ವೆ ಸಮಾರಂಭದಲ್ಲಿ ಅನುಚಿತವಾಗಿ ವರ್ತನೆ ಮಾಡಿದ್ದ ಎಂಬುದನ್ನು ಖರ್ಗೆ ಅವರು ಪ್ರಸ್ತಾವಿಸಿದ್ದಾರಂತೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖರ್ಗೆ ಅವರಿಗೆ ಭೀಮಾನಾಯ್ಕ್ ಗೆ ಟಿಕೆಟ್ ನೀಡಲು ಸಮ್ಮತಿಸುವಂತೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರಂತೆ.
ಅಂತಿಮವಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರ ಪಾಲಾಗುತ್ತದೋ ಕಾದು ನೋಡಬೇಕಿದೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا