Urdu   /   English   /   Nawayathi

ಗೋವಾ ಮದ್ಯ ಅಬಕಾರಿ ಇಲಾಖೆಯ ವಶಕ್ಕೆ

share with us

ಕಾರವಾರ: 08 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಶಿರವಾಡ ರೈಲ್ವೇ ನಿಲ್ದಾಣದ ಹಿಂಬದಿಯಲ್ಲಿ ಅಬಕಾರಿ ಇಲಾಖೆಯವರ ತಂಡ ದಾಳಿ ನಡೆಸಿ ಸುಮಾರು 32,000/- ರೂಪಾಯಿಯ ಗೋವಾ ಮದ್ಯವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಬಕಾರಿ ನರೀಕ್ಷಕಿ ಪಿ,ಕೆ ಶಶಿಕಲಾ ಹಾಗೂ ಶೋಭಾ ಅವರ ತಂಡ ಈ ದಾಳಿ ನಡೆಸಿ 101 ಲೀಟರ್ ಸ್ಥಳೀಯ ಮದ್ಯ ಮತ್ತು 22.57 ಲೀಟರ್ ಗೋವಾ ಫೆನ್ನಿ ಒಟ್ಟು 123.57 ಲೀಟರ್ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ದಾಳಿಯ ವೇಳೆ ಆರೋಪಿ ಪರಾರಿಯಾಗಿದ್ದು ಆತನನ್ನು ಹಿಡಿಯುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕಾರವಾರ: 08 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕಾರವಾರದ ಗಾಬೀತವಾಡದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 23,970 ರೂಪಾಯಿ ಬೆಲೆಯ ಮದ್ಯವನ್ನು ಅಬಕಾರಿ ಇಲಾಖೆಯವರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿಯಲ್ಲಿ ಸುಮಾರು 21,000 ರೂಪಾಯಿ ಮೌಲ್ಯದ 105 ಲೀಟರ್ ಗೋವಾ ಫೆನ್ನಿ ಮತ್ತು 2,970 ರೂಪಾಯಿ ಮೌಲ್ಯದ 16.5 ಲೀಟರ್ ಗೋವಾ ಬಿಯರ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا