Urdu   /   English   /   Nawayathi

ಚುನಾವಣಾ ಅಕ್ರಮ ತಡೆಗೆ ಕೇಂದ್ರದ ಶಸ್ತ್ರ ಸಜ್ಜಿತ ಪಡೆ, ಬೆಂಗಳೂರು ಸುತ್ತಲೂ ಚೆಕ್‍ ಪೋಸ್ಟ್

share with us

ಬೆಂಗಳೂರು: 07 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ಬೆಂಗಳೂರಿನಾದ್ಯಂತ ಸುಮಾರು 400ಕ್ಕೂ ಹೆಚ್ಚು ಚೆಕ್‍ಪೊೀಸ್ಟ್‍ಗಳನ್ನು ಸ್ಥಾಪಿಸಿ ಕಾನೂನು ಸುವ್ಯವಸ್ಥೆ ರಕ್ಷಣೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಭದ್ರತೆಗಾಗಿ ಸುಮಾರು 45 ಕಂಪೆನಿ ಕೇಂದ್ರ ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಕಂಪೆನಿಯಲ್ಲಿ 100ರಿಂದ 110 ಶಸ್ತ್ರಸಜ್ಜಿತ ಸಿಬ್ಬಂದಿಗಳಿರುತ್ತಾರೆ. ಈಗಾಗಲೇ 15 ಕಂಪೆನಿ ಕೇಂದ್ರ ಪಡೆಗಳು ಬಂದಿವೆ. ಉಳಿದ ಪಡೆಗಳು ಹಂತ ಹಂತವಾಗಿ ಬೆಂಗಳೂರಿಗೆ ಬರಲಿವೆ ಎಂದು ಹೇಳಿದರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಎಸಿಪಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. 6 ಸಂಚಾರಿ ತಂಡಗಳನ್ನು ನಿಯೋಜಿಸಿದ್ದು, ಅದರಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಸ್ಥಿರ ಚೆಕ್‍ಪೊೀಸ್ಟ್‍ಗಳನ್ನು ಸ್ಥಾಪಿಸಲಾಗಿದೆ. 9 ಪ್ರಮುಖ ಚೆಕ್‍ಪೊೀಸ್ಟ್‍ಗಳು ಬೆಂಗಳೂರಿನಾದ್ಯಂತ ಕೆಲಸ ಮಾಡುತ್ತಿವೆ. ಗಡಿ ಭಾಗದಲ್ಲಿ 20 ಚೆಕ್‍ಪೊೀಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಅಲ್ಲಲ್ಲಿ ಪೊಲೀಸ್ ಅಧಿಕಾರಿಗಳು ತಾತ್ಕಾಲಿಕ ಚೆಕ್‍ಪೊೀಸ್ಟ್‍ಗಳನ್ನು ಸ್ಥಾಪಿಸಿ ಕÉಲಸ ಮಾಡುತ್ತಿದ್ದು, ಸುಮಾರು 400ಕ್ಕೂ ಹೆಚ್ಚು ಪರಿಶೀಲನಾ ತಂಡಗಳಿವೆ. ಚುನಾವಣೆ ಅಕ್ರಮ ಮತ್ತು ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದರು.

ಈವರೆಗೂ ನೀತಿಸಂಹಿತೆ ಉಲ್ಲಂಘನೆಯಡಿ 8 ಪ್ರಕರಣಗಳನ್ನು ದಾಖಲಿಸಲಾಗಿವೆ. ಸುಮಾರು ಜನವರಿಯಿಂದೀಚೆಗೆ 2800 ಜನರ ಮೇಲೆ ಸೆಕ್ಷನ್ 107, 110ರ ಪ್ರಕಾರ ಕ್ರಮ ಜರುಗಿಸಲಾಗಿದೆ. ಶಸ್ತ್ರಾಸ್ತಗಳನ್ನು ಠಾಣೆಗೆ ಜಮಾ ಮಾಡಲು ಸೂಚಿಸಲಾಗಿದ್ದು, ಈಗಾಗಲೇ ಶೇ.70ರಷ್ಟು ಶಸ್ತ್ರಾಸ್ತ್ರಗಳನ್ನು ಮಾಲೀಕರು ಠಾಣೆಗೆ ಒಪ್ಪಿಸಿದ್ದಾರೆ ಎಂದರು. ಬೆಂಗಳೂರಿನಲ್ಲಿ ಸುಮಾರು 8ಸಾವಿರ ಜಾಮೀನು ರಹಿತ ವಾರೆಂಟ್‍ಗಳಿದ್ದವು. ಅವುಗಳಲ್ಲಿ 5ಸಾವಿರ ವಾರೆಂಟ್‍ಗಳನ್ನು ಜಾರಿಗೊಳಿಸಲಾಗಿದೆ. ಇನ್ನು ಮೂರು ಸಾವಿರ ವಾರೆಂಟ್‍ಗಳು ಹೊರ ರಾಜ್ಯಕ್ಕೆ ಸೇರಿದ್ದವಾಗಿದ್ದು, ಅಪಘಾತ, ಕ್ರಿಮಿನಲ್ ಚಟುವಟಿಕೆಗಳಿಗೆ ಸಂಬಂಧಿಸಿದ್ದವಾಗಿವೆ. ಬೇರೆ ರಾಜ್ಯಗಳಾಗಿರುವುದರಿಂದ ಅವುಗಳನ್ನು ಜಾರಿಗೊಳಿಸಲು ವಿಳಂಬವಾಗಿದೆ ಎಂದು ಹೇಳಿದರು. ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಭದ್ರತೆಗಾಗಿ 600 ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಹಿರಿಯ ಅಧಿಕಾರಿ ಬಿ.ಕೆ.ಸಿಂಗ್ ಅವರು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಒಂದೂವರೆ ಕೋಟಿ ಬಗ್ಗೆ ಮಾಹಿತಿ ಇಲ್ಲ:
ನಿನ್ನೆ ಪತ್ತೆಯಾದ ಒಂದೂವರೆ ಕೋಟಿ ರೂ. ಯಾವ ಪಕ್ಷಕ್ಕೆ ಸೇರಿದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಹಣವಿದ್ದ ಕಾರು ಮತ್ತು ವ್ಯಕ್ತಿಯನ್ನು ಸಮಗ್ರವಾಗಿ ತಪಾಸಣೆ ಮಾಡಲಾಗಿದೆ. ಯಾವುದೇ ಪಕ್ಷದ ಚಿಹ್ನೆ, ಬಾವುಟವಾಗಲಿ ಸಿಕ್ಕಿಲ್ಲ. ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿ ತಾನು ಗುತ್ತಿಗೆದಾರ ಎಂದು ಹೇಳಿಕೊಳ್ಳುತ್ತಿದ್ದು, ಅದು ನನಗೆ ಸೇರಿದ ಹಣ, ಯಾರಿಗೂ ಕೊಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ತನಿಖೆ ಮುಂದುವರೆದಿದೆ ಎಂದು ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا