Urdu   /   English   /   Nawayathi

ಭಾರೀ ಮಳೆ, ಸಿಡಿಲಿಗೆ ಇಬ್ಬರ ಸಾವು

share with us

ಬೆಂಗಳೂರು: 03 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಕೊಂಚ ಇಳಿಮುಖವಾದಂತೆ ಕಂಡುಬಂದ ಮಳೆ ಸೋಮವಾರ ಮತ್ತೆ ಅಬ್ಬರಿಸಿದೆ. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಕಡೆ ಧಾರಾಕಾರವಾಗಿ ಗುಡುಗು ಸಹಿತ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಮನೋಡ್ಡಂಪಲ್ಲಿ ಮಧ್ಯಾಹ್ನ ಸಿಡಿಲು ಬಡಿದು ಜಾನುವಾರುಗಳನ್ನು ಮೇಯಿಸುತ್ತಿದ್ದ ರೈತರಿಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರನ್ನು ರಾಮನೋಡ್ಡಂಪಲ್ಲಿ ನಿವಾಸಿಗಳಾದ ನರಸಿಂಹಪ್ಪ(60)ಹಾಗೂ ಸದಾಶಿವ (48) ಎಂದು ಗುರುತಿಸಲಾಗಿದೆ. ದನಕರುಗಳನ್ನು ಮೇಯಿಸುತ್ತಿದ್ದ ವೇಳೆ ಮಳೆ ಬಂದಿದ್ದು, ಈ ವೇಳೆ ಹತ್ತಿರವಿದ್ದ ಪಾಳುಬಿದ್ದ ಕಟ್ಟಡಕ್ಕೆ ತೆರಳುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ಮೂರ್‍ನಾಲ್ಕು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ವಾಡಿಕೆಗಿಂತ ನಾಲ್ಕುಪಟ್ಟು ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ವಾಡಿಕೆ ಮಳೆ 8.5 ಮಿ.ಮೀ. ಆದರೆ, ಬಿದ್ದದ್ದು 32.1 ಮಿ.ಮೀ. ಇನ್ನೂ ಎರಡು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

ಉತ್ತರದ ಛತ್ತೀಸ್‌ಗಡದಿಂದ ರಾಜ್ಯದ ಒಳನಾಡಿನಲ್ಲಿ ಕಡಿಮೆ ಒತ್ತಡದ ತಗ್ಗು ಹಾದುಹೋಗಿದೆ. ಜತೆಗೆ ಇದೇ ಭಾಗದಲ್ಲಿ ಮೇಲ್ಮೆ„ ಸುಳಿಗಾಳಿ ಉಂಟಾಗಿದೆ. ಇದರಿಂದ ಸತತ ನಿರಂತರವಾಗಿ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಇದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

ಸೋಮವಾರ ಸಂಜೆ ಚಿಕ್ಕಬಳ್ಳಾಪುರದಲ್ಲಿ 58 ಮಿ.ಮೀ., ಹಾಸನ 43, ತುಮಕೂರು 59, ಬೆಂಗಳೂರು ಗ್ರಾಮಾಂತರ 36.5, ಬಳ್ಳಾರಿ 33, ಚಿತ್ರದುರ್ಗ 27.4, ಕೋಲಾರ 28, ಮಂಡ್ಯ 18.3, ಮೈಸೂರು 23 ಮಿ.ಮೀ. ಮಳೆ ದಾಖಲಾಗಿದೆ.

ಆಲಿಕಲ್ಲು ರಾಶಿ ನೋಡಿ ಬೆಚ್ಚಿಬಿದ್ದ ಜನ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಗುಡುಗು ಸಿಡಿಲಿನ ಜತೆಗೆ ಅಬ್ಬರಿಸಿದ ಅಕಾಲಿಕ ಮಳೆಯಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲೂಕಿನ ವಿವಿಧೆಡೆಗಳಲ್ಲಿ ಬಿದ್ದ ರಾಶಿ ರಾಶಿ ಆಲಿಕಲ್ಲು ಗಡ್ಡೆಗಳನ್ನು ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ರಾಶಿರಾಶಿ ಆಲಿಕಲ್ಲುಗಳನ್ನು ಜನ ಕೈಯಲ್ಲಿ ಹಿಡಿದು ತಮ್ಮ ಮೊಬೈಲ್‌ಗ‌ಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ತುಮಕೂರು ಜಿಲ್ಲೆ ಕುಣಿಗಲ್‌ ಪಟ್ಟಣದಲ್ಲಿಯೂ ಆಲಿ ಕಲ್ಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಸಂಜೆ 5.30 ಸುಮಾರಿಗೆ ಶುರುವಾದ ಬಿರುಗಾಳಿಗೆ ತೆಂಗಿನ ಮರಗಳು, ರಸ್ತೆ ಬದಿಯ ಗಿಡಗಳು ನೆಲಕ್ಕೆ ಉರುಳಿದವು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا