Urdu   /   English   /   Nawayathi

ವಿಜಯೇಂದ್ರ ಅಲ್ದಿದ್ರೆ ಅವರಪ್ಪ ಸ್ಪರ್ಧಿಸಲಿ-ಸಿದ್ದು

share with us

ಮೈಸೂರು, ಏ.2-  ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ನನ್ನ ಮಗ ಡಾ.ಯತೀಂದ್ರನ ವಿರುದ್ಧ ವಿಜಯೇಂದ್ರ ಸ್ಪರ್ಧಿಸುವ ಬದಲು ಅವರಪ್ಪ ಬಿ.ಎಸ್.ಯಡಿಯೂರಪ್ಪ ಸ್ಪರ್ಧಿಸಿದರೂ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು. ಅವರು ಇಂದು ತಮ್ಮ ನಿವಾಸದಲ್ಲಿ ಮಾತನಾಡಿದ ಅವರ  ವಿಜಯೇಂದ್ರ ಸ್ಪರ್ಧಿಸುವ ಬದಲು ಸ್ವತಃ ಅವರಪ್ಪ ಬಿ.ಎಸ್.ಯಡಿಯೂರಪ್ಪನವರೇ ಸ್ಪರ್ಧಿಸಲಿ. ಇದಕ್ಕೆ ಭಯಪಡುವುದಾಗಲಿ ಆಥವಾ ಆತಂಕ ಪಡುವ ಪ್ರಶ್ನೆಯೆ ಇಲ್ಲ ಎಂದು ಸಿಡಿಮಿಡಿಯಿಂದಲೇ ಪ್ರತಿಕ್ರಿಯಿಸಿದರು. ಯಡಿಯೂರಪ್ಪನವರಿಗೂ ವರುಣಾ ಕ್ಷೇತ್ರಕ್ಕೂ ಯಾವ ಸಂಬಂಧವೂ ಇಲ್ಲ. ನನ್ನ ಮಗನ ವಿರುದ್ಧ ಅವರು ಸ್ಪರ್ಧಿಸಿದರೆ ಈ ಕ್ಷೇತ್ರದ ಜನತೆ ಯಡಿಯೂರಪ್ಪ ಸ್ಪರ್ಧಿಸಲಿದ್ದಾರೆ ಎಂದು ಓಡೋಡಿ ಬರುವುದಿಲ್ಲ. ನನ್ನ ಮಗ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಆ ಕ್ಷೇತ್ರದ ಜನತೆ ನನ್ನ ಮಗ ಎಂದು ತಿಳಿದು ಅವನಿಗೆ ಮತ ಹಾಕುವುದಿಲ್ಲ. ಯಾರಿಗೆ ಮತ ಹಾಕಬೇಕೆಂದು ಈ ಕ್ಷೇತ್ರದ ಜನತೆಗೆ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿದ್ಯಾಮಾನಗಳನ್ನು ಪ್ರತಿಯೊಬ್ಬರು ಅವಲೋಕನಾ ಮಾಡುತ್ತಾರೆ. ಜನತೆ ಪ್ರಬುದ್ಧರಾಗಿದ್ದು, ಯಾರನ್ನು ಚುನಾಯಿಸಿದರೆ ಒಳ್ಳೆಯದು ಎಂದು ನಿರ್ಧರಿಸಿಯೇ ಮತ ಚಲಾಯಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ನಾನು ಮುಖ್ಯಮಂತ್ರಿಯಾಗಿ ಈ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದೇನೆ ಎಂಬುದು ಇಲ್ಲಿನ ಮತದಾರರಿಗೆ ಅರಿವಿದೆ. ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸಿದವನು ನಾನೇ ಹೊರತು ಬಿ.ಎಸ್.ವೈ ಅವರಲ್ಲ. ಹಾಗಾಗಿ ಈ ಕ್ಷೇತ್ರದ ಜನರು ಯಾರೋ ಬಂದು ನಿಂತರೆ ಅವರಿಗೆ ಮತ ಹಾಕುವಷ್ಟು ಮೂರ್ಖರಲ್ಲ. ಮುಖ್ಯಮಂತ್ರಿಗಳ  ಮಕ್ಕಳು ಚುನಾವಣೆಗೆ ನಿಂತು ಗೆಲ್ಲುವುದರಾಗಿದ್ದರೆ ಯಾಱ್ಯಾರೋ ಎಲ್ಲೆಲ್ಲೋ ಸ್ಪರ್ಧಿಸುತ್ತಿದ್ದರು. ಬಿ.ಎಸ್.ವೈ ರವರ ಮಗ ವಿಜಯೇಂದ್ರನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಆ ಬಗ್ಗೆ ನನ್ನ ಬಳಿ ಹೆಚ್ಚಿನ ಪ್ರಶ್ನೆಯನ್ನು ಕೇಳಲೇ ಬೇಡಿ ಎಂದು ಖಾರವಾಗಿ ನುಡಿದರು.

ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರೇ ಬಂದು ಸ್ಪರ್ಧಿಸಿದರೂ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಲಿದೆ. ಇಲ್ಲಿನ ಜನರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತವನು ನಾನು. ಕಳೆದ 40 ವರ್ಷಗಳಿಂದ ಈ ಎರಡು ಕ್ಷೇತ್ರಗಳಲ್ಲಿ ಜನತೆಯ ಆಶಯಗನುಗುಣವಾಗಿ ಹಗಲಿರುಳು ಶ್ರಮಿಸಿ ಕ್ಷೇತ್ರ ಅಭಿವೃದ್ಧಿ ಪಡಿಸಿದ್ದೇನೆ. ಹಾಗಾಗಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.

 ಕಾವೇರಿ ನೀರಿಗೆ ಸಂಬಂಧಿಸಿದಂತೆ ತಮಿಳು ನಾಡು ಸರ್ಕಾರ ಬಂದ್ ಕರೆ ನೀಡಿದೆ. ತಮಿಳು ನಾಡು ಸಂಸದರ ಒತ್ತಾಯಕ್ಕೆ ಮಣಿದು ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬಾರದು. ಕರ್ನಾಟಕ ಸರ್ಕಾರ ಭ್ರಷ್ಟಾಚಾರ ಅನ್ನುವ ಮೋದಿ ತಾವು 9 ವರ್ಷ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಅಧಿಕಾರಿಗಳನ್ನು ನೇಮಕ ಮಾಡಿರಲಿಲ್ಲ. ಮೋದಿ ಪ್ರಧಾನಿ ಆಗಿ ನಾಲ್ಕು ವರ್ಷವಾದರೂ ಜನ ಲೋಕಪಾಲ್ ಮಸೂದೆಯನ್ನು ಜಾರಿಗೆ ತಂದಿಲ್ಲ. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿ ಕಾರಿದರು.
ಮಂಡ್ಯ ಕ್ಷೇತ್ರದಿಂದ ಅಂಬರೀಶ್ ಸ್ಪರ್ಧಿಸುವ ವಿಷಯವಾಗಿ ಮಾತನಾಡಿದ ಮುಖ್ಯಮಂತ್ರಿಯವರು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹಾರಿಕೆ ಉತ್ತರ ನೀಡಿದರು.

 ತಳವಾರ ಮತ್ತು ಪರಿವಾರ ಪರಿಶಿಷ್ಟ ವರ್ಗಕ್ಕೆ ಸೇರಿಸುವ ವಿಚಾರ ಕೇಂದ್ರ ಸರ್ಕಾರಕ್ಕೆ ಅನುಮೋದನೆ ಕಳುಹಿಸಿದ್ದೇ ನಾವು. ನಾವು ಕಳುಹಿಸದೆಯೇ ಇದು ಅಂಗಿಕೃತವಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಇದು ಕೇವಲ ಮಂತ್ರಿ ಮಂಡಲದಲ್ಲಿ ಮಾತ್ರ ಒಪ್ಪಿಗೆಯಾಗಿದೆ. ಇನ್ನೂ ರಾಜ್ಯಸಭೆ, ಲೋಕಸಭೆಯಲ್ಲಿ ಅಂಗೀಕೃತವಾಗಬೇಕಿದೆ. ಚುನಾವಣೆ ಹತ್ತಿರವಾದ ಹಿನ್ನಲೆ ಇದನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದು ಟೀಕಿಸಿದರು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا