Urdu   /   English   /   Nawayathi

ಗಣಪತಿ ಆತ್ಮಹತ್ಯೆ ಕೇಸ್​: ಸಚಿವ ಜಾರ್ಜ್​ ಮೊದಲ ಆರೋಪಿ

share with us

ಬೆಂಗಳೂರು: ಡಿವೈಎಸ್​ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBI ದಾಖಲಿಸಿರುವ ಚಾರ್ಜ್​ ಶೀಟ್​​ ನಲ್ಲಿ ಸಚಿವ ಜಾರ್ಜ್​ ಮೊದಲ ಆರೋಪಿ ಎಂದು ಉಲ್ಲೇಖವಾಗಿದೆ. DYSP ಗಣಪತಿ ಕೇಸ್‌ನಲ್ಲಿ ಕೆ.ಜೆ.ಜಾರ್ಜ್‌ A1 ಆರೋಪಿಯಾಗಿದ್ದು, ಲೋಕಾಯುಕ್ತ ಐಜಿಪಿ ಪ್ರಣಬ್​ ಮೊಹಂತಿ​ 2ನೇ ಹಾಗೂ ರಾಜ್ಯಗುಪ್ತದಳ ಎಡಿಜಿಪಿ ಎ.ಎಂ.ಪ್ರಸಾದ್‌ 3ನೇ ಆರೋಪಿಯಾಗಿದ್ದಾರೆ. ಚೆನ್ನೈನ ಸಿಬಿಐ ಅಧಿಕಾರಿಗಳಿಂದ FIR ದಾಖಲಾಗಿದ್ದು, ಸಿಆರ್‌ಪಿಸಿ ಸೆಕ್ಷನ್ 154ರಡಿ FIR ದಾಖಲಾಗಿದೆ. ಜಿ.ಕಲೈಮಣಿ ನೇತೃತ್ವದಲ್ಲಿ ಗಣಪತಿ ಆತ್ಮಹತ್ಯೆ ಕೇಸ್​ ತನಿಖೆ ನಡೆಯುತ್ತಿದೆ. ಜಿ.ಕಲೈಮಣಿ, ಚೆನ್ನೈನ ಸಿಬಿಐ ಹೆಚ್ಚುವರಿ SP ಆಗಿದ್ದಾರೆ. CBI ನಿಂದ ಚಾರ್ಜ್​ ಶೀಟ್​ ದಾಖಲಾಗಿರುವುದರಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮೊದಲ ಆರೋಪಿಯಾಗಿ ಜಾರ್ಜ್​ ಹೆಸರು ಕೇಳಿಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಇದರಿಂದ ಜಾರ್ಜ್‌ ರಾಜೀನಾಮೆಗೆ ಪ್ರತಿಪಕ್ಷಗಳಿಂದ ಒತ್ತಡ ಹೇರುವ ಸಾಧ್ಯತೆ ಹೆಚ್ಚಾಗಿದೆ. ಇನ್ನು 2016ರ ಜುಲೈ 7 ರಂದು ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಡಿಕೇರಿಯ ವಿನಾಯಕ ಲಾಡ್ಜ್‌ನ ರೂ.ನಂ.315ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಎಂ.ಕೆ.ಗಣಪತಿ ಪುತ್ರ ನೇಹಲ್‌ ಗಣಪತಿ ದೂರು ನೀಡಿದ್ದರು. (ದಿಗ್ವಿಜಯ ನ್ಯೂಸ್​)

Prayer Timings

Fajr فجر
Dhuhr الظهر
Asr أسر
Maghrib مغرب
Isha عشا