Urdu   /   English   /   Nawayathi

ಎಸ್‌ಬಿಐಗೆ ಪಂಗನಾಮ : ಕಾನಿಷ್ಕ್ ಗೋಲ್ಡ್‌ನಿಂದ ರೂ. 842 ಕೋಟಿ ವಂಚನೆ

share with us

ಚೆನ್ನೈ: 21 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಗೆ ಭಾರಿ ಪ್ರಮಾಣದಲ್ಲಿ ವಂಚಿಸಿರುವ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು ದೇಶಾದ್ಯಂತ ಮಳಿಗೆಗಳನ್ನು ಹೊಂದಿರುವ ಕಾನಿಷ್ಕ್ ಗೋಲ್ಡ್ ಸಂಸ್ಥೆ 842.15 ಕೋಟಿ ರೂ.ಗಳ ಸಾಲಕ್ಕೆ ವಂಚಿಸಿರುವುದರ ಬಗ್ಗೆ ಬ್ಯಾಂಕ್ ಸಿಬಿಐ ಸಹಾಯ ಕೋರಿದೆ. ಚೆನ್ನೈನ ಟಿ ನಗರದಲ್ಲಿ ರಿಜಿಸ್ಟರ್ಡ್ ಕಛೇರಿ ಹೊಂದಿದ್ದು, ಭೂಪೇಶ್ ಕುಮಾರ್ ಜೈನ್ ಮತ್ತು ಅವರ ಪತ್ನಿ ನೀತಾ ಜೈನ್ ಅದರ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಇವರಿಬ್ಬರೂ ಮಾರಿಷಸ್‌ನಲ್ಲಿದ್ದು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸಿಬಿಐ ಈವರೆಗೆ ಸಂಸ್ಥೆ ವಿರುದ್ಧ ಎಫ್ಐಆರ ್ ದಾಖಲಿಸಿಲ್ಲ. ಕಾನಿಷ್ಕ್ ಗೋಲ್ಡ್ ಸಂಸ್ಥೆಗೆ ಸಾಲ ನೀಡಿರುವ 14 ಸರ್ಕಾರಿ ಮತ್ತು ಖಾಸಗಿಯವರಲ್ಲಿ ಎಸ್‌ಬಿಐ ಪ್ರಮುಖ ಬ್ಯಾಂಕ್ ಆಗಿದೆ. 2018ರ ಜನವರಿ 25 ರಂದು ಸಿಬಿಐಗೆ ಎಸ್‌ಬಿಐ ಪತ್ರ ಬರೆದಿದ್ದು ಕಾನಿಷ್ಕ್ ಸಂಸ್ಥೆ ದಾಖಲೆಗಳನ್ನು ತಿದ್ದಿದೆ. ರಾತ್ರೋರಾತ್ರಿ ಅಂಗಡಿಗಳನ್ನು ಮುಚ್ಚಿದೆ ಎಂದು ಆರೋಪಿಸಿತ್ತು.

ಸಾಲವಾಗಿ ನೀಡಿರುವ ಅಸಲು ಹಣವೇ 824.15 ಕೋಟಿ ರೂ.ಗಳಾಗಿದ್ದು ಬಡ್ಡಿ ಸೇರಿದರೆ ನಷ್ಟದ ಮೊತ್ತ 1000 ಕೋಟಿ ರೂ.ಗಳನ್ನು ಮೀರುತ್ತದೆ.ವಂಚನೆ ಕುರಿತಂತೆ ಆರ್‌ಬಿಐಗೆ 2017ರ ನ  . 11 ರಂದು ಮೊದಲು ತಿಳಿಸಿದ್ದೇ ಎಸ್‌ಬಿಐ 2018ರ ಜನವರಿ ವೇಳೆಗೆ ಸಾಲ ನೀಡಿದ ಇತರ ಎಲ್ಲರೂ ತಮಗೂ ವಂಚನೆಯಾಗಿರುವ ಬಗ್ಗೆ ಹೇಳಿದರು.

ಕಾನಿಷ್ಕ್ ಸಂಸ್ಥೆ 8 ಸದಸ್ಯ ಬ್ಯಾಂಕ್‌ಗಳಿಗೆ ಬಡ್ಡಿ ಪಾವತಿಯಲ್ಲಿ ವಂಚನೆ ನಡೆಸುತ್ತಿರುವುದು ಪತ್ತೆಯಾಯಿತು. 2017ರ ಮಾರ್ಚ್ ವೇಳೆಗೆ ಎಲ್ಲಾ 14 ಬ್ಯಾಂಕ್‌ಗಳಿಗೆ ಪಾವತಿಗಳೇ ಸ್ಥಗಿತಗೊಂಡವು!

2017ರ ಏ. 5 ರಂದು ಸ್ಟಾಕ್ ಆಡಿಟ್ ಆರಂಭಿಸಿದಾಗ ದಂಪತಿಯನ್ನು ಸಂಪರ್ಕಿಸಲು ಬ್ಯಾಂಕ್‌ಗಳಿಗೆ ಸಾಧ್ಯವೇ ಆಗಲಿಲ್ಲ.2017ರ ಮೇ 25 ರಂದು ಬ್ಯಾಂಕರ್‌ಗಳು ಕಾನಿಷ್ಕ್ ಗೋಲ್ಡ್‌ನ ಕಾರ್ಪೊರೇ ಟ್ ಕಛೇರಿಗೆ ಭೇಟಿ ನೀಡಿದಾಗ ಸ್ಟಾಕ್ ಇರಲಿಲ್ಲ ಹಾಗೂ ಯಾವುದೇ ಚುಟುವಟಿಕೆ ಇಲ್ಲದೆ ಕಛೇರಿ ಬಾಗಿಲು ಮುಚ್ಚಿತ್ತು.

ಅದೇ ದಿನ ಭೂಪೇಶ್ ಜೈನ್ ಬ್ಯಾಂಕರ್‌ಗಳಿಗೆ ಪತ್ರ ಬರೆದು ದಾಖಲೆಗಳನ್ನು ತಿದ್ದಿ ಸ್ಟಾಕ್‌ಗಳನ್ನು ತೆರವು ಮಾಡಲಾಗಿದೆ. (ಇವುಗಳನ್ನು ಸಾಲ ನೀ‌ಡಿರುವವರಿಗೆ  ಸಾಲ ನೀಡಿರುವವರಿಗೆ ಆಧಾರವಾಗಿ ನೀಡಲಾಗಿದೆ) ಎಂದಿದ್ದರು. ಇದಾದ ನಂತರ ಅಧಿಕಾರಿಗಳಿಗೆ ಸದಸ್ಯ ಶಾಖೆಗಳಿಗೆ ಭೇಟಿ ನೀಡಿದಾಗ ಅವು ಮುಚ್ಚಿರುವುದು ಪತ್ತೆಯಾಗಿತ್ತು.

2017ರ ಮೇ ತಿಂಗಳಲ್ಲೇ ನಷ್ಟ ತಡೆಯಲಾಗದೆ ಸಂಸ್ಥೆ ಮುಚ್ಚಿ ಹೋಯಿತು ಎಂದು ಮದ್ರಾಸ್ ಆಭರಣ ಮತ್ತು ವಜ್ರ ವ್ಯಾಪಾರಿಗಳ ಸಂಘದ ಪ್ರತಿನಿಧಿಯೊಬ್ಬರು ಹೇಳಿದರು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا