Urdu   /   English   /   Nawayathi

ಬ್ಯಾಂಕ್‍ಗೆ 4,000 ಕೋಟಿ ರೂ. ವಂಚಿಸಿದ ಮೂವರು ಅರೆಸ್ಟ್

share with us

ಮುಂಬೈ: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 4,000 ಕೋಟಿ ರೂ. ಬ್ಯಾಂಕ್ ವಂಚನೆ ಹಗರಣದ ಸಂಬಂಧ ಸಂಸ್ಥೆಯೊಂದರ ಮೂವರು ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ(ಪಿಎನ್‍ಬಿ) 12,723 ಕೋಟಿ ರೂ.ಗಳ ವಂಚನೆ ಪ್ರಕರಣ ಬೆಳಕಿಗೆ ಬಂದ ಮುಂಬೈನಲ್ಲೇ ಮತ್ತೊಂದು ಹಗರಣ ಬಹಿರಂಗಗೊಂಡಂತಾಗಿದೆ.  ಪರೇಖ್ ಅಲ್ಯುಮಿನೆಕ್ಸ್ ಲಿಮಿಟೆಡ್ (ಪಿಎಎಲ್) ಸಂಸ್ಥೆಯಿಂದ ಭಾರೀ ವಂಚನೆ ಎಸಗಲಾಗಿದ್ದು, ಈ ಸಂಬಂಧ ಮುಂಬೈನ್ ಆರ್ಥಿಕ ಅಪರಾಧಗಳ ಘಟಕದ ಪೊಲೀಸರು ನಿರ್ದೇಶಕರಾದ ಭವರ್‍ಲಾಲ್ ಭಂಡಾರಿ, ಪ್ರೇಮಲ್ ಗೋರಾಗಾಂಧಿ ಮತ್ತು ಕಮಲೇಶ್ ಕಾನುಂಗೋ ಎಂಬುವರನ್ನು ವಂಚನೆ, ಮೋಸ, ನಂಬಿಕೆ ಮತ್ತು ಕ್ರಿಮಿನಲ್ ಒಳಸಂಚು ಆರೋಪಗಳ ಮೇಲೆ ಬಂಧಿಸಿದ್ದಾರೆ. ಈ ಸಂಸ್ಥೆಯಿಂದ 250 ಕೋಟಿ ರೂ.ಗಳ ವಂಚನೆಯಾಗಿದೆ ಎಂದು ಆಕ್ಸಿಸ್ ಬ್ಯಾಂಕ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ.

ತಮಗೂ ಈ ಸಂಸ್ಥೆಯಿಂದ ಸುಮಾರು 4,000 ಕೋಟಿ ರೂ.ಗಳಷ್ಟು ವಂಚನೆಯಾಗಿದೆ ಎಂದು ಇತರ ಹಣಕಾಸು ಸಂಸ್ಥೆಗಳು ಹಾಗೂ ಸಾಲ ನೀಡಿದವರು ಆರೋಪಿಸಿದ್ದು, ಮತ್ತಷ್ಟು ಅಕ್ರಮ-ಅವ್ಯವಹಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಸಾಲ ಪತ್ರ (ಲೆಟರ್ ಆಫ್ ಕ್ರೆಡಿಟ್) ಬಳಸಿ ಆಕ್ಸಿಸ್ ಬ್ಯಾಂಕ್‍ನ ಫೆÇೀರ್ಟ್‍ನಲ್ಲಿರುವ ಮುಖ್ಯ ಶಾಖೆಗೆ ಬೋಗಸ್ ಕಂಪನಿಗಳ ಮೂಲಕ ನಕಲಿ ಸರಕುಪಟ್ಟಿಗಳು (ಇನ್‍ವಾಯ್ಸ್) ಮತ್ತು ರಶೀದಿಗಳನ್ನು ಸೃಷ್ಟಿಸಿ 250 ಕೋಟಿ ರೂ.ಗಳನ್ನು ವಂಚಿಸಲಾಗಿದೆ. ಈ ಹಗರಣದಲ್ಲಿ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿಲ್ಲ.

ಪಿಎಎಸ್ ಸಂಸ್ಥೆಯ ಇತರ ನಿರ್ದೇಶಕರು ಮತ್ತು ಉನ್ನತಾಧಿಕಾರಿಗಳಾದ ಅಮಿತಾಭ್ ಪರೇಖ್ (ನಿಧನರಾಗಿದ್ದಾರೆ), ರಾಜೇಂದ್ರ ಗೋತಿ, ದೇವಾಂಶು ದೇಸಾಯಿ, ಕಿರಣ್ ಪಾರಿಖ್ ಮತ್ತು ವಿಕ್ರಂ ಮೊರ್ದಾನಿ ಅವರ ವಿರುದ್ಧವೂ ದೂರು ದಾಖಲಾಗಿದೆ. ಈಗ ಬಂಧಿತರಾಗಿರುವ ಮೂವರು ನಿರ್ದೇಶಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಈ ವಂಚನೆ ಜಾಲದಲ್ಲಿ ಶಾಮೀಲಾಗಿರುವ ಇತರರ ವಿರುದ್ಧ ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا