Urdu   /   English   /   Nawayathi

ಎಲ್ಲ ರಾಜಕೀಯ ಪಕ್ಷಗಳು 'ಮೋದಿ ಮುಕ್ತ ಭಾರತ' ನಿರ್ಮಾಣಕ್ಕೆ ಮುಂದಾಗಬೇಕು: ರಾಜ್ ಠಾಕ್ರೆ

share with us

ಮುಂಬೈ: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಈಡೇರಿಸಲಾಗದ ಭರವಸೆಗಳಿಂದ ದೇಶದ ಜನರು ರೋಸಿ ಹೋಗಿದ್ದಾರೆ. ಬಿಜೆಪಿಯವರ 'ಕಾಂಗ್ರೆಸ್ ಮುಕ್ತ ಭಾರತ' ಘೋಷಣೆಗೆ ಪರ್ಯಾಯವಾಗಿ ಎಲ್ಲ ರಾಜಕೀಯ ಪಕ್ಷಗಳು 'ಮೋದಿ ಮುಕ್ತ ಭಾರತ' ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ. ನಗರದ ಶಿವಾಜಿ ಉದ್ಯಾನದಲ್ಲಿ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ 1947ರಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯ ಗಳಿಸಿತು. 1977ರಲ್ಲಿ ಎರಡನೇ ಬಾರಿಗೆ ಸ್ವಾತಂತ್ರವಾಯಿತು(ತುರ್ತು ಪರಿಸ್ಥಿತಿ ನಂತರದ ಚುನಾವಣೆ), 2019ರಲ್ಲಿ ದೇಶ ಮೋದಿ ಮುಕ್ತವಾದರೆ, ನಮಗೆ ಮೂರನೇ ಬಾರಿ ಸ್ವಾತಂತ್ರ್ಯ ಸಿಕ್ಕಂತೆ ಎಂದು ಠಾಕ್ರೆ ಅಭಿಪ್ರಾಯಪಟ್ಟರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ನಾನೂ ಬಯಸುತ್ತೇನೆ. ಆದರೆ ಆ ವಿಷಯ ರಾಜಕೀಯವಾಗಿ ಬಳಕೆಯಾಗದಿರಲಿ, ಮತಗಳಿಕೆಗಾಗಿ ಸಮಾಜವನ್ನು ವಿಭಜಿಸದಿರಲಿ ಎಂದು ಆಶಿಸುತ್ತೇನೆ. 

ಮೋದಿ ಅವರ ವಿದೇಶ ಪ್ರವಾಸಗಳು ದೇಶಕ್ಕೆ ಬಂಡವಾಳವನ್ನು ತರುತ್ತಿಲ್ಲ. ಹಾಗಾದರೆ, ಅವರು ಪಕೋಡಾ ತಯಾರಿಕೆಗೆ ಬೇಕಾದ ಹಿಟ್ಟು ತರಲು ದೇಶಗಳನ್ನು ಸುತ್ತುತ್ತಾರೆಯೇ? ಎಂದು ರಾಜ್ ಠಾಕ್ರೆ ವ್ಯಂಗ್ಯವಾಡಿದರು.

ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಹಲವು ಪಕ್ಷಗಳಲು ಒಂದಾಗಿ, ಮೋದಿಯವರನ್ನು ಸೋಲಿಸಲು ಪಣತೊಟ್ಟಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎರಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ವಿಪಕ್ಷಗಳ ಆತ್ಮವಿಶಾಸವನ್ನು ಹೆಚ್ಚಿಸಿದೆ ಎಂದರು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا