Urdu   /   English   /   Nawayathi

ಬಹುಕೋಟಿ ಮೇವು ಹಗರಣದ 4ನೆ ಪ್ರಕರಣದಲ್ಲೂ ಲಾಲು ದೋಷಿ

share with us

ರಾಂಚಿ: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಬಹುಕೋಟಿ ಮೇವು ಹಗರಣದ ನಾಲ್ಕನೆ ಪ್ರಕರಣದ ತೀರ್ಪು ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ಘೋಷಿಸಿದೆ. ಲಾಲು ಅವರೊಂದಿಗೆ ಮಾಜಿ ಸರ್ಕಾರಿ ನೌಕರ ಅರುಣ್ ಕುಮಾರ್ ಸಿಂಗ್ ಸೇರಿದಂತೆ ಏಳು ಮಂದಿಯನ್ನು ಅಪರಾಧಿಗಳು ಎಂದು ಘೋಷಿಸಿದೆ. ಇದೇ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರನ್ನು ಖುಲಾಸೆಗೊಳಿಸಿದೆ.
ಹಜಾರಿಬಾಗ್ ಖಜಾನೆಯ ಮಾಜಿ ಉದ್ಯೋಗಿ ಅರುಣ್ ಮತ್ತು ಇತರ ಆರು ಮಂದಿ ಅಕ್ರಮವಾಗಿ ಹಣವನ್ನು ಪಡೆದು ದುರುಪಯೋಗ ಮಾಡಿಕೊಂಡಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ಜಾರ್ಖಂಡ್‍ನ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿಗಳನ್ನು ದೋಷಿಯನ್ನಾಗಿ ಘೋಷಿಸಿದ್ದು, ಸದ್ಯದಲ್ಲೇ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا