Urdu   /   English   /   Nawayathi

ಅನಧಿಕೃತ ಫ್ಲೆಕ್ಸ್ ವಿರುದ್ಧ ಕ್ರಮ; ಈ ವಾರ 3 ಕೇಸು:ಟಿ.ಆರ್‌.ಸುರೇಶ್‌

share with us

ಮಹಾನಗರ: 17 ಮಾರ್ಚ್ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಫ್ಲೆಕ್ಸ್‌ ಹಾವಳಿಗೆ ಸಂಬಂಧಿಸಿ ಈ ವಾರದಲ್ಲಿ ಮೂರು ಕೇಸುಗಳು ದಾಖಲಾಗಿವೆ. ಅನಧಿಕೃತವಾಗಿ ಹಾಗೂ ಪ್ಲಾಸ್ಟಿಕ್‌ ಫ್ಲೆಕ್ಸ್‌ ಗಳನ್ನು ಹಾಕುವುದನ್ನು ನಿರ್ಬಂಧಿಸಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಸಹಿತ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಕ್ತ ಸೂಚನೆ ನೀಡಿದ್ದಾರೆ. ಚುನಾವಣೆ ಸಮೀಪಿಸಿದಾಗ ಇನ್ನೂ ಕಠಿನ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ತಿಳಿಸಿದರು. ನಗರದಲ್ಲಿ ಫ್ಲೆಕ್ಸ್‌ ಹಾವಳಿ ಹೆಚ್ಚುತ್ತಿದ್ದು, ಒಂದು ಸಣ್ಣ ಕಾರ್ಯಕ್ರಮ ನಡೆಯುವಾಗಲೂ 50- 60ರಷ್ಟು ಫ್ಲೆಕ್ಸ್‌ಗಳನ್ನು ಸಂಘಟಕರು ರಸ್ತೆ ಬದಿ ಹಾಕುತ್ತಾರೆ. ಕೆಲವೊಮ್ಮೆ ಇದು ಗಲಾಟೆಗೂ ಕಾರಣವಾಗುತ್ತದೆ ಎಂದು ಶುಕ್ರವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರು ನೀಡಿದ ಸಂದರ್ಭ ಕಮಿಷನರ್‌ ಈ ವಿಚಾರ ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್‌ ಹಾಕುವ ಬಗ್ಗೆ ಯಾವುದೇ ದೂರುಗಳಿದ್ದರೆ ಸಾರ್ವಜನಿಕರು ಸಲ್ಲಿಸಬಹುದು. ಬಟ್ಟೆಯ ಬ್ಯಾನರ್‌ಗಳನ್ನು ಹಾಕಬಹುದಾಗಿದ್ದು, ಅದಕ್ಕೂ ಪೂರ್ವಾನುಮತಿ ಅವಶ್ಯ ಎಂದರು.

ಬಸ್‌ ಅಸಮರ್ಪಕ ಸಂಚಾರ
ಕೊಣಾಜೆ ಮಾರ್ಗವಾಗಿ ಸಂಚರಿಸುವ ಸುಮಾರು 30ರಷ್ಟು ಬಸ್‌ಗಳಿದ್ದು, ಈ ಪೈಕಿ ಎರಡು ಬಸ್‌ಗಳು ಮಾತ್ರ ಕೊಣಾಜೆ ಗ್ರಾ.ಪಂ. ಕಚೇರಿ ತನಕ ಹೋಗುತ್ತಿವೆ. ಆದ್ದರಿಂದ ಎಲ್ಲ ಬಸ್‌ಗಳು ಗ್ರಾ.ಪಂ. ತನಕ ಹೋಗುವಂತಾಗ ಬೇಕೆಂದು ಸಾರ್ವಜನಿಕರು ಮನವಿ ಮಾಡಿದರು. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದು ಕಮಿಷನರ್‌ ವಿವರಿಸಿದರು.

ತಲಪಾಡಿ- ಕಿನ್ನಿಗೋಳಿ ಬಸ್‌ ಕಳೆದ 5- 6 ತಿಂಗಳಿಂದ ಸಂಚರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರು ನೀಡಿದಾಗ ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದರು.

75ನೇ ಫೋನ್‌ ಇನ್‌
ಇದು 75ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 28 ಕರೆಗಳು ಬಂದವು. ಡಿಸಿಪಿಡಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಕುಮಾರ ಸ್ವಾಮಿ ಮತ್ತು ಸುನಿಲ್‌ ಕುಮಾರ್‌, ಸಬ್‌ ಇನ್‌ಸ್ಪೆಕ್ಟರ್‌ ಚಂದ್ರ, ಎಎಸ್‌ಐ ಯೂಸುಫ್‌ ಮತ್ತು ಶ್ಯಾಮ ಸುಂದರ್‌, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಅವರು ಉಪಸ್ಥಿತರಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا