Urdu   /   English   /   Nawayathi

ಮಾತಿನ ಮತ, ಸಂದರ್ಶನ

share with us

ಜಾತಿ, ಧರ್ಮ ಭೇದ ಮರೆತು ಕೆಲಸ ಮಾಡುವುದೇ ರೈ ರಾಜಕೀಯ

ಪಕ್ಷದಲ್ಲಿ ಚುನಾವಣಾ ತಯಾರಿ ಹೇಗೆ ನಡೆಯುತ್ತಿದೆ?
ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ಸಾಕಷ್ಟು ತಯಾರಿ ನಡೆಯುತ್ತಿದೆ. ಈಗಾಗಲೇ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಭೇಟಿ, ಸಭೆಗಳು ನಡೆದಿವೆ. ಜತೆಗೆ ಗ್ರಾಮ ಸಮಿತಿಯಿಂದಲೇ ಸಭೆಗಳು ನಡೆಯುತ್ತಿವೆ. ಬ್ಲಾಕ್‌ನಿಂದ ಬೂತ್‌ ಮಟ್ಟದಲ್ಲಿ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದ್ದು ಅವರು ಕೂಡ ಮತದಾರರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.

ಬಂಟ್ವಾಳದಲ್ಲಿ ಕಾಂಗ್ರೆಸ್‌ ಗೆಲುವಿಗೆ ಪೂರಕ ಅಂಶಗಳು... ?
ಸಚಿವ ಬಿ. ರಮಾನಾಥ ರೈ ಅವರು ಈಗಾಗಲೇ 6 ಬಾರಿ ಗೆದ್ದು, ಅಭಿವೃದ್ಧಿಯ ದೃಷ್ಟಿಯಿಂದ ಬಂಟ್ವಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಜಾತಿ, ಧರ್ಮ, ಭೇದ ಮರೆತು ಕೆಲಸ ಮಾಡುವುದೇ ರೈ ಅವರ ರಾಜಕೀಯ. ಸರಕಾರದಿಂದ ಸಿಗುವ ಸೌಲಭ್ಯವನ್ನು ಯಾವುದೇ ಬೇಧವಿಲ್ಲದೆ ಜನರ ಬಳಿಗೆ ತಲುಪಿಸಿದ್ದಾರೆ. ಮತದಾರರ ಜತೆ ನೇರ ಸಂಪರ್ಕವನ್ನು ಇಟ್ಟುಕೊಂಡು ಅವರ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಕ್ಷೇತ್ರದ ಎಲ್ಲ ಮೂಲ ಸೌಕರ್ಯಗಳಿಗೂ ಒತ್ತು ನೀಡಿ ಕೋಟ್ಯಂತರ ರೂ. ಅನುದಾನ ತಂದಿದ್ದಾರೆ. ಹೀಗಾಗಿ ಈ ಬಾರಿಯೂ ಬಂಟ್ವಾಳದಲ್ಲಿ ರಮಾನಾಥ ರೈ ಅವರೇ ಗೆಲ್ಲುತ್ತಾರೆ.

ಬಿಜೆಪಿಯೂ ಗೆಲ್ಲುವ ವಿಶ್ವಾಸದಲ್ಲಿದೆಯಲ್ವಾ ?
ಚುನಾವಣೆ ಎದುರಿಸುವಾಗ ಎಲ್ಲರೂ ಗೆಲ್ಲುವ ವಿಶ್ವಾಸದಿಂ ದಲೇ ಇರುತ್ತಾರೆ. ಒಂದೆರಡು ಸಾವಿರ ಮತ ಗಳಿಸುವವರು ಕೂಡ ಗೆಲುವು ನಮ್ಮದೇ ಎನ್ನುವುದು ಸಾಮಾನ್ಯ. ಹಿಂದಿನ ಚುನಾವಣೆ ಸಂದರ್ಭ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿತ್ತು. ಆ ಸಂದರ್ಭದಲ್ಲೇ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಕಾಂಗ್ರೆಸ್‌ ಆಡಳಿತದಲ್ಲಿದ್ದು, ಸಿದ್ದರಾಮಯ್ಯ ಅವರ ಆಡಳಿತವನ್ನು ಎಲ್ಲ ವರ್ಗದ ಜನತೆ ಒಪ್ಪಿಕೊಂಡಿದ್ದಾರೆ.

ವಿರೋಧಿಗಳು ಸಚಿವ ರೈ ಅವರನ್ನು ಹಿಂದೂ ವಿರೋಧಿ ಎನ್ನಲು ಕಾರಣ?
ಕಾಂಗ್ರೆಸ್‌ ವಿರೋಧಿಗಳ ಬಳಿ ಮತದಾರರಿಗೆ ವಿವರಿಸಲು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಅಪಪ್ರಚಾರ ಅವರಿಗೆ ಅನಿವಾರ್ಯ. ಪ್ರಸ್ತುತ ಬಿಜೆಪಿಯವರು ಹಿಂದೂ ವಿರೋಧಿ ಎಂದರೆ, ಮುಂದೆ ಎಸ್‌ಡಿಪಿಐ ನಿಂತರೆ ಮುಸ್ಲಿಂ ವಿರೋಧಿ ಎನ್ನಬಹುದು. ಆದರೆ ರೈ ಅವರು ಸರ್ವಧರ್ಮದವರನ್ನೂ ಗೌರವಿಸುವವರು. ಮನಪಾ ಮೇಯರ್‌ ಆಯ್ಕೆ ಸಂದರ್ಭ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡುವಂತೆ ಬೇಡಿಕೆ ಕೇಳಿಬಂದಿತ್ತು. ಆದರೆ ತತ್‌ಕ್ಷಣ ಯಾವುದೇ ವಿವಾದ ಸೃಷ್ಟಿಯಾಗಿಲ್ಲ. ಈಗ ಎಲ್ಲವೂ ಸರಿಯಾಗಿದೆ. ಆದರೆ ಕೆಲವು ಪಕ್ಷದವರು ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ.

ಗೆಲುವಿಗೆ ಮುಂದಿನ ಕಾರ್ಯಚಟುವಟಿಕೆ ಏನು?
ಉಸ್ತುವಾರಿಗಳು, ಸಚಿವರು, ಶಾಸಕರು, ಡಿಸಿಸಿ ಪದಾಧಿಕಾರಿಗಳು ಹೀಗೆ ಎಲ್ಲರ ಸಲಹೆ ಸೂಚನೆಗಳಂತೆ ಕಾರ್ಯಕರ್ತರು ಮತ ಯಾಚಿಸಲಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا