Urdu   /   English   /   Nawayathi

ಪುತ್ತೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ: ಇಂದು ಮತ್ತೆ ಎರಡು ಪ್ರಕರಣ ಪತ್ತೆ

share with us

ಪುತ್ತೂರು: 29 ಜೂನ್ 2020 (ಫಿಕ್ರೋಖಬರ್ ಸುದ್ದಿ) ನಗರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಹೊರಗುತ್ತಿಗೆ ವಾಹನದಲ್ಲಿ ಚಾಲಕನಾಗಿರುವ ಗ್ರಾಮೀಣ ಭಾಗದ ವ್ಯಕ್ತಿ ಮತ್ತು ನಗರಸಭಾ ವ್ಯಾಪ್ತಿಯ ಯುವತಿಗೆ ಕೊರೊನಾ ದೃಢಪಟ್ಟಿದೆ. ಪುತ್ತೂರು ನಗರಸಭೆಯ ಕಸ ಸಂಗ್ರಹ ಹೊರಗುತ್ತಿಗೆ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 51 ವರ್ಷ ವಯಸ್ಸಿನ ಬೆಟ್ಟಂಪಾಡಿ ನಿವಾಸಿ ಮತ್ತು ನಗರಸಭಾ ವ್ಯಾಪ್ತಿಯ ತೆಂಕಿಲದ ಓರ್ವ ಯುವತಿಗೆ ಕೊರೊನಾ ದೃಢಪಟ್ಟಿದೆ. ನಗರಸಭಾ ಕಸ ಸಂಗ್ರಹದ ವಾಹನ ಚಾಲಕ ಬೆಟ್ಟಂಪಾಡಿ ನಿವಾಸಿಯಾಗಿದ್ದು, ಆತ ಲಾರಿಯಲ್ಲಿ ಮನೆ ಮನೆಗೆ ಕಸ ಸಂಗ್ರಹಕ್ಕಾಗಿ ತೆರಳುತ್ತಿದ್ದ. ಎರಡು ದಿನಗಳ ಹಿಂದೆ ಚಾಲಕ ಸೇರಿದಂತೆ ಇಬ್ಬರು ಪೌರಕಾರ್ಮಿಕರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಚಾಲಕನಿಗೆ ಕೊರೊನಾ ದೃಢಪಟ್ಟ ಬಗ್ಗೆ ವರದಿ ಬಂದಿದ್ದು, ಉಳಿದ ಇಬ್ಬರು ಪೌರಕಾರ್ಮಿಕರ ವರದಿ ನೆಗೆಟಿವ್ ಬಂದಿದೆ‌. ತೆಂಕಿಲದ ಯುವತಿಯು ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದರು. ಇವರಿಬ್ಬರಿಗೆ ಕೊರೊನಾ ದೃಢಪಟ್ಟ ವರದಿ ಬಂದಿದೆ. ಇದೀಗ ಇಬ್ಬರನ್ನೂ ವೆನ್‌ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಟ್ಟಂಪಾಡಿಯ ಚಾಲಕನ ಮನೆಯನ್ನು ಸೀಲ್‌ ಡೌನ್ ಮಾಡಲಾಗಿದೆ. ಅದೇ ರೀತಿ ನಗರಸಭಾ ವ್ಯಾಪ್ತಿಯಲ್ಲಿ ಕೊರೊನಾ ಪತ್ತೆಯಾದ ಯುವತಿಯ ಮನೆಯನ್ನೂ ಸೀಲ್‌ ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا