Urdu   /   English   /   Nawayathi

10 ವರ್ಷ ಸೂರ್ಯನಲ್ಲಾದ ಬದಲಾವಣೆ ನೋಡಬೇಕೆ? ನಾಸಾದ ಈ ಅದ್ಭುತ ವಿಡಿಯೋ ನೋಡಿ..

share with us

ವಾಷಿಂಗ್ಟನ್: 28 ಜೂನ್ 2020 (ಫಿಕ್ರೋಖಬರ್ ಸುದ್ದಿ) ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಸೂರ್ಯನ ಕುರಿತು ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಯಾದರೂ, ರವಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಶತಕೋಟಿ ವರ್ಷಗಳೂ ಸಹ ಸಾಲುವುದಿಲ್ಲ. ಸೂರ್ಯನ ಕುರಿತು ನಿರಂತರ ಸಂಶೋಧನೆ ನಡೆಸುತ್ತಾ ಬಂದಿರುವ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ಇದೀಗ ಸೋಲಾರ್​ ಡೈನಾಮಿಕ್ಸ್ ಅಬ್ಸರ್ವೇಟರಿ (ಎಸ್‌ಡಿಒ) ಸಂಗ್ರಹಿಸಿದ ಡೇಟಾದಿಂದ ಸಿದ್ಧಪಡಿಸಿದ ಸೂರ್ಯನ 10 ವರ್ಷಗಳ ಅವಧಿಯ ಪರಿಭ್ರಮಣೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸೂರ್ಯನನ್ನು ಗಮನಿಸುತ್ತಿರುವ ಎಸ್‌ಡಿಒ, ಪ್ರತಿ 0.75 ಸೆಕೆಂಡಿಗೆ ಒಂದರಂತೆ ಸೂರ್ಯನ 425 ಮಿಲಿಯನ್ ಹೈ-ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿದಿದೆ. ಕಳೆದ 10 ವರ್ಷಗಳಲ್ಲಿ 20 ಮಿಲಿಯನ್ ಗಿಗಾಬೈಟ್ ಡೇಟಾವನ್ನು ಸಂಗ್ರಹಿಸಿರುವುದಾಗಿ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ತಿಳಿಸಿದೆ. 11 ವರ್ಷಗಳ ಕಾಲ ಗ್ರಹಗಳ ಚಲನೆ, ಸೌರಚಕ್ರದಲ್ಲಾಗುವ ಬದಲಾವಣೆಗಳನ್ನು ಈ ವಿಡಿಯೋ ತೋರಿಸುತ್ತದೆ. ಈ ವಿಡಿಯೋವನ್ನು ಯುಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕೆಳಗಿನ ಲಿಂಕ್​ ಬಳಸಿ ವೀಕ್ಷಿಸಬಹುದಾಗಿದೆ. ಈ ಮಾಹಿತಿಯು ನಮ್ಮ ಹತ್ತಿರದ ನಕ್ಷತ್ರದ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಅದು ಸೌರಮಂಡಲದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಹೊಸ ಆವಿಷ್ಕಾರಗಳನ್ನು ಶಕ್ತಗೊಳಿಸಲು ಸಹಕಾರಿಯಾಗಿದೆ ಎಂದು ನಾಸಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏನಿದು ಎಸ್‌ಡಿಒ?

ಸೂರ್ಯನ ಶಕ್ತಿಯ ಮೂಲ, ಸೂರ್ಯನ ಒಳಭಾಗ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಸೂರ್ಯನ ವಾತಾವರಣದಲ್ಲಿ ಶಕ್ತಿಯನ್ನು ಹೇಗೆ ಸಂಗ್ರಹಿಸಲಾಗುತ್ತದೆ ಮತ್ತು ಬಿಡುಗಡೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ನಾಸಾದ ಎಸ್‌ಡಿಒ ಮಿಷನ್ 2010 ರಲ್ಲಿ ಪ್ರಾರಂಭವಾಯಿತು. ಎಸ್‌ಡಿಒ, ನಾಸಾದ 'ಲಿವಿಂಗ್​ ವಿಥ್​ ಸ್ಟಾರ್​' (LWS) ಕಾರ್ಯಕ್ರಮದ ಅಡಿಯಲ್ಲಿ ಅಂತರಿಕ್ಷಕ್ಕೆ ಕಳುಹಿಸಿದ ಮೊದಲ ಉಪಗ್ರಹವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا