Urdu   /   English   /   Nawayathi

ಮಂಗಳೂರು | ಕಂಡಕ್ಟರ್‌ಗೂ ಪಿಪಿಇ ಕಿಟ್‌!

share with us

ಮಂಗಳೂರು: 06 ಜೂನ್ 2020 (ಫಿಕ್ರೋಖಬರ್ ಸುದ್ದಿ) ಲಾಕ್‌ಡೌನ್‌ ನಿಧಾನವಾಗಿ ಸಡಿಲಿಕೆ ಆಗುತ್ತಿದ್ದು, ಜನಜೀವನ ಸಹಜತೆಯತ್ತ ಮರಳುತ್ತಿದೆ. ಈಗಾಗಲೇ ಖಾಸಗಿ ಬಸ್‌ಗಳ ಓಡಾಟ ಆರಂಭವಾಗಿದೆ. ಈ ಮಧ್ಯೆ ಸೋಂಕು ತಗಲದಂತೆ ಅಗತ್ಯ ಮುಂಜಾಗ್ರತೆ ವಹಿಸಿರುವ ಖಾಸಗಿ ಬಸ್‌ಗಳ ನಿರ್ವಾಹಕರು, ಇದೀಗ ಪಿಪಿಇ ಕಿಟ್‌ ಮಾದರಿಯ ರಕ್ಷಾ ಕವಚ ಧರಿಸಲು ಮುಂದಾಗಿದ್ದಾರೆ. ಸ್ಟೇಟ್ ಬ್ಯಾಂಕ್‌ನಿಂದ ಶಕ್ತಿನಗರಕ್ಕೆ ತೆರಳುವ ರೂಟ್ ನಂಬರ್‌ 6 ಎ ನಗರ ಸಂಚಾರದ ಬಸ್‌ನ ನಿರ್ವಾಹಕರೊಬ್ಬರು ರಕ್ಷಣೆ ಪಡೆಯಲೆಂದು ಪಿಪಿಇ ಕಿಟ್ ಮಾದರಿಯಲ್ಲಿ ರಕ್ಷಣಾ ಕವಚ ಧರಿಸಿ, ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೈಗವಸು, ಆರೋಗ್ಯ ತಪಾಸಣೆ, ಮಾಸ್ಕ್ ಹಾಕಿ ಕರ್ತವ್ಯ ನಿರ್ವಹಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಚಿಸಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಬಸ್‌ನ ನಿರ್ವಾಹಕರು ರಕ್ಷಣಾ ಕವಚ ಧರಿಸಿ ಕೆಲಸ ಮಾಡುತ್ತಿರುವುದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا