Urdu   /   English   /   Nawayathi

ಪುತ್ತೂರಲ್ಲಿ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ ಶಾಸಕ ಸಂಜೀವ ಮಠಂದೂರು

share with us

ಪುತ್ತೂರು (ದಕ್ಷಿಣ ಕನ್ನಡ): 06 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ಮಹಾಮಾರಿಯಿಂದ ರಕ್ಷಣೆ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಬಾರಿ ಹಕ್ಕುಪತ್ರ ವಿತರಣೆಯಲ್ಲಿ ತಡವಾಗಿದೆ. ಆದರೆ ಕಳೆದ 5 ವರ್ಷದಿಂದ ನಮ್ಮ ರಾಜ್ಯದಲ್ಲಿ ಹಕ್ಕುಪತ್ರಗಳನ್ನು ಕಾಲಮಿತಿಯಲ್ಲೇ ವಿತರಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಮುಂದಿನ ಜು. 5ರ ಒಳಗೆ ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಪುತ್ತೂರಿನಲ್ಲಿ ನೂರಕ್ಕೆ ನೂರು ಹಕ್ಕುಪತ್ರ ವಿತರಣೆ ಆಗಬೇಕು ಎಂದರು. ತಾಲೂಕು ಆಡಳಿತದಿಂದ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು. ಫೆಬ್ರವರಿ ಬಳಿಕ ಅಧಿವೇಶನ ಹಾಗೂ ಕೊರೊನಾದಿಂದಾಗಿ ಹಕ್ಕುಪತ್ರ ಕೊಡಲಾಗಿಲ್ಲ. ಹಾಗೆಂದು ಯಾರೂ ಕೂಡಾ ಹಕ್ಕುಪತ್ರ ಪಡೆಯುವಲ್ಲಿ ವಂಚಿತರಾಗಬಾರದು. ಪುತ್ತೂರಿನಲ್ಲಿ 13,757 ಜನರು 94 ಸಿಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ 7,759 ಮಂದಿಗೆ 94 ಸಿ ಮಂಜೂರಾಗಿದೆ. 5,900 ಅರ್ಜಿಗಳು ತಿರಸ್ಕೃತಗೊಂಡಿವೆ. ನಗರಸಭೆ ವ್ಯಾಪ್ತಿಯಲ್ಲಿ 94 ಸಿಸಿ 87 ಅರ್ಜಿಗಳು ಇನ್ನೂ ಬಾಕಿ ಇವೆ. 94 ಸಿ ಮತ್ತು 94 ಸಿಸಿ ಸೇರಿ ಒಟ್ಟು ಸುಮಾರು 350 ಅರ್ಜಿಗಳು ಬಾಕಿ ಇವೆ. ಅವೆಲ್ಲವನ್ನು ಜು. 5ಕ್ಕೆ ವಿತರಣೆ ಮಾಡುವ ಕೆಲಸ ಆಗಬೇಕು ಎಂದು ತಾಲೂಕು ಆಡಳಿತಕ್ಕೆ ಸೂಚಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا