Urdu   /   English   /   Nawayathi

ಇಂದಿರಾ ಕ್ಯಾಂಟೀನ್ ಹಣ ದುರುಪಯೋಗ ಆರೋಪ: ಸಿದ್ದರಾಮಯ್ಯ ವಿರುದ್ಧದ ದೂರು ವಜಾ

share with us

ಬೆಂಗಳೂರು: 04 ಜೂನ್  2020 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆ ಹಾಗೂ ಈ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಯಲ್ಲಿ ಆಗಿದೆ ಎನ್ನಲಾಗಿದ್ದ  ಹಣದ ದುರುಪಯೋಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರ ವಿರುದ್ಧದ ದೂರನ್ನು ತಳ್ಳಿಹಾಕಿದೆ. ದೂರಿಗೆ ಸಂಬಂಧಿಸಿದಂತೆ  ದೂರುದಾರರಿಂದ ಯಾವುದೇ ಖಚಿತ  ಪುರಾವೆಗಳನ್ನು ಒದಗಿಸಲಾಗಿಲ್ಲ ಎಂದಿರುವ ಲೋಕಾಯುಕ್ತ, ಮೊದಲ ಇಬ್ಬರು ಆರೋಪಿಗಳಾದ ಸಿದ್ದರಾಮಯ್ಯ ಮತ್ತು ಜಾರ್ಜ್ ವಿರುದ್ಧದ ದೂರನ್ನು ವಜಾಗೊಳಿಸಿದೆ. ಹಾಗೆಯೇ, ಬಿಬಿಎಂಪಿಯ ಖಾತೆಗಳ ವಿಭಾಗವು ಈ ಆರೋಪಗಳಿಗೆ ಉತ್ತರಿಸಬೇಕಾಗಿದೆ ಎಂದು ಹೇಳಿದೆ. ಆದಾಗ್ಯೂ, ಲೋಕಾಯುಕ್ತ, ಅಂದಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಐಎಫ್‌ಎಸ್ ಅಧಿಕಾರಿ ಮನೋಜ್ ರಂಜನ್ ವಿರುದ್ಧದ ದೂರನ್ನು ಬಾಕಿ ಉಳಿಸಿಕೊಂಡಿದ್ದು ಬಿಎಂಪಿ ಆಯುಕ್ತರು ಇದಕ್ಕೆ ಪ್ರತಿಕ್ರಿಯಿಸಬೇಕೆಂದು ಆದೇಶ ಹೊರಡಿಸಿದೆ. ಲೋಕಾಯುಕ್ತವು ಜುಲೈ 15, 2020 ರೊಳಗೆ ರಂಜನ್ ಮತ್ತು ಬಿಬಿಎಂಪಿ ಆಯುಕ್ತರಿಂದ ಪ್ರತಿಕ್ರಿಯೆಗಳನ್ನು ಕೋರಿದೆ. ಲೋಕಾಯುಕ್ತ ಮುಂದೆ ಸಲ್ಲಿಸಿದ ದೂರಿನಲ್ಲಿ, ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಪೂರೈಕೆ ಸಂಬಂಧ ಸಿದ್ದರಾಮಯ್ಯ, ಜಾರ್ಜ್ ಮತ್ತು ರಂಜನ್ ಅವರು ಸುಳ್ಳು ಬಿಲ್ಗಳನ್ನು ಸೃಷ್ಟಿಸಿ ರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನಗರದ ಶಾಸ್ತ್ರಿ ನಗರ ನಿವಾಸಿ ಗಣೇಶ್ ಸಿಂಗ್ ಎನ್ನುವವರು ಆರೋಪಿಸಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا