Urdu   /   English   /   Nawayathi

ಠಾಣೆಯಲ್ಲಿ 50 ಬುಲೆಟ್​ಗಳು​ ಮಿಸ್ಸಿಂಗ್​... ತನಿಖೆ ಕುರಿತು ಮೈಸೂರು ಎಸ್​ಪಿ ಮಾಹಿತಿ

share with us

ಮೈಸೂರು: 02 ಜೂನ್  2020 (ಫಿಕ್ರೋಖಬರ್ ಸುದ್ದಿ) ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಬುಲೆಟ್​ಗಳು ಕಾಣೆಯಾದ ಬಗ್ಗೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹೇಳಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಬುಲೆಟ್​ಗಳು ಕಾಣೆಯಾದ ಸಂಬಂಧ ನಂಜನಗೂಡಿನ ಡಿವೈಎಸ್ಪಿ ಅವರಿಗೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಬುಲೆಟ್​ಗಳನ್ನು ಎಣಿಕೆ ಮಾಡಲು ಸೂಚಿಸಲಾಗಿದೆ. ಈ ಕುರಿತು ಎಫ್ಐಆರ್ ದಾಖಲು ಮಾಡಲಾಗಿದ್ದು, ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ಟೀಂ ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ ಮಾಹಿತಿ ನೀಡಿದ್ದಾರೆ. ಬುಲೆಟ್​ಗಳನ್ನು ಹೊರಗಿನವರು ಬಂದು ತೆಗೆದುಕೊಂಡು ಹೋಗಿರುವ ಸಾಧ್ಯತೆ ಇಲ್ಲ. ಅದರ ಕೀ ಪೊಲೀಸ್ ಸ್ಟೇಷನ್​ನ ರೈಟರ್ ಬಳಿ ಇರುತ್ತದೆ. ಠಾಣೆಯ ಪಿಎಸ್ಐ ಇನ್​ಚಾರ್ಜ್ ಇರುತ್ತಾರೆ. ಈ ತನಿಖೆ ನಡೆಸುತ್ತಿದ್ದೇವೆ ಎಂದರು.

ಕಂಟೈನ್ಮೆಂಟ್ ಮುಕ್ತ ನಂಜನಗೂಡು:

ಮೈಸೂರು ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗುವ ಕಡೆ ಹೆಜ್ಜೆ ಇಟ್ಟಿದ್ದು, ನಂಜನಗೂಡಿನ ಕಂಟೈನ್ಮೆಂಟ್ ಝೋನ್ ಮುಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಾರ್ಗ ಬದಲಾವಣೆ ಮಾಡಲಾಗಿದ್ದು, ಹೊರ ರಾಜ್ಯದಿಂದ ಮೈಸೂರಿಗೆ ಬರುವವರ ಬಗ್ಗೆ ನಿಗಾ ಇಡಲಾಗಿದೆ. ಜಿಲ್ಲೆಯ ಯಾವುದೇ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿಲ್ಲ. ಸಿಬ್ಬಂದಿಯನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا