Urdu   /   English   /   Nawayathi

ಕಡಬ | ಮಿಡತೆ ಹಿಂಡು ಪ್ರತ್ಯಕ್ಷ, ರೈತರಲ್ಲಿ ಆತಂಕ

share with us

ಕಡಬ: 31 ಮೇ 2020 (ಫಿಕ್ರೋಖಬರ್ ಸುದ್ದಿ) ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮದ ಹೇರದ ಆನಂದ ಹೇರ ಎಂಬವರ ತೋಟದ ಮರವೊಂದರಲ್ಲಿ ಶುಕ್ರವಾರ ಸಂಜೆ ಮಿಡತೆಗಳ ಹಿಂಡು ಕಾಣಿಸಿಕೊಂಡಿದೆ. ಹೇರ ಕೊಣಾಜೆ ಪ್ರದೇಶದ ಕಾಡಿನ ಅಂಚಿನಲ್ಲಿದೆ. ಮಿಡತೆಗಳು ರಾತ್ರಿವರೆಗೂ ಇದ್ದು, ಶನಿವಾರ ಬೆಳಿಗ್ಗೆ ಕಾಣಿಸಿಕೊಂಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ತೋಟದಲ್ಲಿ ಹಸಿರು, ಕೆಂಪು, ಬಿಳಿ, ಕಪ್ಪು ಬಣ್ಣ ಮಿಶ್ರಿತ ಮಿಡತೆಗಳು ಕಾಣಿಸಿದ್ದು, ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ‘ಈ ಗಾತ್ರದ ಮಿಡತೆಯೂ ನಮಗೆ ಹೊಸದಾಗಿದೆ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಮಿಡತೆ ಹಾವಳಿ ಬಗ್ಗೆ ಕೇಳಿದ ಕಾರಣ, ಆತಂಕ ಉಂಟಾಗಿದೆ. ಸಂಬಂಧಿತ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸ್ಥಳೀಯರಾದ ಆನಂದ ಹೇರಾ ಕೋರಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا