Urdu   /   English   /   Nawayathi

ಲಾಕ್​ಡೌನ್​ 5.0ನ ಕರ್ಫ್ಯೂ ಸಮಯ ಬದಲು: ಸರ್ಕಾರದ ಅಧಿಸೂಚನೆ ನಿರೀಕ್ಷೆಯಲ್ಲಿ ಪೊಲೀಸ್​ ಇಲಾಖೆ

share with us

ಬೆಂಗಳೂರು: 31 ಮೇ 2020 (ಫಿಕ್ರೋಖಬರ್ ಸುದ್ದಿ) ಕೋವಿಡ್​​-19 ಮಹಾಮಾರಿಯ ಕಾರಣದಿಂದ ಹೇರಿದ್ದ ಲಾಕ್​ಡೌನ್​ 4.0 ಇಂದು ಕೊನೆಗೊಳ್ಳಲಿದೆ. ನಾಳೆಯಿಂದ ಲಾಕ್​ಡೌನ್​ 5.0 ಜಾರಿಗೆ ಬರಲಿದ್ದು, ಕರ್ಫ್ಯೂ ಸಮಯವೂ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧಿಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ರಾವ್ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿನ ಕರ್ಫ್ಯೂ ನಿಯಮವೂ ಸಡಿಲಿಕೆಯಾಗಿದೆ. ಹಿಂದಿನ ಲಾಕ್​ಡೌನ್​ನಂತೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಆದರೆ ಹೊಸ ಲಾಕ್​ಡೌನ್​ ಘೋಷಣೆಯಾಗಿದ್ದು, ಕರ್ಫ್ಯೂ ಅವಧಿಯೂ ಕೂಡಾ ಬದಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ಕರ್ಫ್ಯೂ ಇರಲಿದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಜನರ ಓಡಾಟ, ವ್ಯಾಪಾರ ವಹಿವಾಟು ಇನ್ನಿತರೆ ಸೂಚನೆಗಳ ಬಗ್ಗೆ ರಾಜ್ಯ ಸರ್ಕಾರದ ಮುಂದಿನ ತೀರ್ಮಾನದ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا