Urdu   /   English   /   Nawayathi

ಬೆಂಗಳೂರು: ಸಿಲಿಂಡರ್ ಸ್ಫೋಟಕ್ಕೆ ಅಲುಗಾಡಿದ ಎರಡಂತಸ್ತಿನ ಕಟ್ಟಡ, ದಂಪತಿಗೆ ಗಂಭೀರ ಗಾಯ

share with us

ಬೆಂಗಳೂರು: 31 ಮೇ 2020 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಬೆಳ್ಳಂಬೆಳಗ್ಗೆ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್​ಎಎಲ್ ಬಳಿಯ ಅನಸಂದ್ರಪಾಳ್ಯದ ಬಳಿ ನಡೆದಿದೆ. ಮುಂಜಾನೆ ಅಡಿಗೆ ಮಾಡಲು ತೆರಳಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಜಖಂಗೊಂಡಿವೆ. ಸಿಲಿಂಡರ್ ಸ್ಪೋಟಕ್ಕೆ ಎರಡು ಅಂತಸ್ತಿನ ಕಟ್ಟಡವೂ ಕೂಡ ಅಲುಗಾಡಿದೆ. ಗಾಯಗೊಂಡ ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ‌ ನೀಡಲಾಗುತ್ತಿದೆ. ಸದ್ಯ ಸ್ಥಳಕ್ಕೆ ಹೆಚ್​​ಎಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا