Urdu   /   English   /   Nawayathi

ಭಟ್ಕಳದ ಕೆಲವು ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಕೆ

share with us

ಭಟ್ಕಳ: 28 ಮೇ 2020 (ಫಿಕ್ರೋಖಬರ್ ಸುದ್ದಿ) ಕೆಲವು ದಿನಗಳ ಹಿಂದೆ ಭಟ್ಕಳದಲ್ಲಿ 28 ಕೋರೋನಾ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿತ್ತು. ಬಳಿಕ ಇಂದು ಐಬಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್,ಪಿ ಶಿವ ಪ್ರಕಾಶ್ ಅವರು ಮೇ 29 ಗುರುವಾರದಿಂದ ಜೂನ್ 8ರ ವರೆಗೆ ಕಂಟೈನ್ಮೆಂಟ್ ಝೋನ್‍ಗಳ ಹೊರತುಪಡಿಸಿ ಅಗತ್ಯ ವಸ್ತುಗಳಾದ ದಿನಸಿ, ಮಾಂಸದ ಅಂಗಡಿ, ಬ್ಯಾಂಕ್, ಪೆಟ್ರೋಲ್ ಪಂಪ್ ಮತ್ತು ಇತ್ಯಾದಿ ಅಂಗಡಿಗಳನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ ತೆರೆಯುವ ಆದೇಶವನ್ನು ಹೊರಡಿಸಿದರು. ಕಂಟೈನ್ಮೆಂಟ್ ಝೋನ್‍ಗಳಾದ ಮದೀನಾ ಕಾಲೋನಿ, ಉಸ್ಮಾನಿಯಾ ಕಾಲೋನಿ, ಗುಡ್ ಲಕ್ ರಸ್ತೆ, ಕೋಕ್ತಿ ನಗರ ಮತ್ತು ಸಲ್ತಾನ್ ಸ್ಟ್ರೀಟ್ ಈ ಪ್ರದೇಶಗಳಲ್ಲಿ ಎಂದಿನಂತೆ ಸೀಲ್ ಡೌನ್ ನಡೆಯಲಿದ್ದು, ಈ ಮಧ್ಯೆ ಕೆಲವು ಪ್ರದೇಶಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿ ಮುಂದಿನ ದಿನಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಲಾಗುವುದು. ಭಟ್ಕಳದ ಜನತೆಯ ಬೆಂಬಲದಿಂದ ಪರಿಸ್ಥಿತಿ ನಿಯಂತ್ರಣದಲ್ಲಿ ತರಲು ಬಹಳಷ್ಟು ಅನುಕೂಲವಾಗಿದೆ. ಪ್ರತಿಯೊಬ್ಬರು ಖಡ್ಡಾಯವಾಗಿ ತಮ್ಮ ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕು. ನಂತರ ಪರಿಸ್ಥಿತಿಯನ್ನು ಇನ್ನಷ್ಟು ನಿಯಂತ್ರಣಕ್ಕೆ ತರಲು ಅನುಕೂಲವಾಗುತ್ತದೆ ಎಂದು ಹೇಳಿದರು.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا